Advertisement
ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಪೆರಾರ ಗ್ರಾಮದ ಅಂಗನವಾಡಿಯೊಂದು ಜಾಗವಿಲ್ಲದೆ ಬಜಪೆ ಗ್ರಾಮದ ಕೊರಕಂಬ್ಳದ ಖಾಸಗಿ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅದೆಷ್ಟೋ ಸರಕಾರಿ ಜಾಗಗಳು ಖಾಲಿ ಬಿದ್ದಿದ್ದು, ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಸದ್ಬಳಕೆ ಮಾಡಬಹುದು. ಆದರೆ ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಅಸಮರ್ಪಕ ವ್ಯವಸ್ಥೆ
ಪಡು ಪೆರಾರ ಗ್ರಾ.ಪಂ.ನ ಉಪಾಧ್ಯಕ್ಷರ ವಾರ್ಡ್ ನಲ್ಲಿರುವ ಈ ಅಂಗನವಾಡಿಯು 2006ರಿಂದ ಖಾಸಗಿ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಂಗನವಾಡಿ ಕೇಂದ್ರದಲ್ಲಿ ಬಜಪೆಯ 5, ಪಡುಪೆರಾರದ 6 ಮಂದಿ ಮಕ್ಕಳಿದ್ದಾರೆ.
Related Articles
Advertisement
ಅಂಗನವಾಡಿಯಲ್ಲಿದ್ದ ಸಮಸ್ಯೆಗಳನ್ನು ನೋಡಿದ ಸ್ಥಳೀಯರು ಈ ಮನೆಯನ್ನು ಅಂಗನವಾಡಿಗೆಂದು ಮೊದಲು ಉಚಿತ ವಾಗಿ ನೀಡಿದ್ದರು. ಈಗ ಬಾಡಿಗೆ ಪಾವತಿಸಲಾಗುತ್ತಿದೆ. ಇಕ್ಕಟ್ಟಾದ ಕೋಣೆಯಲ್ಲಿ ಮಕ್ಕಳು ಕುಳಿತುಕೊಳ್ಳಬೇಕಾದ ಪರಿ ಸ್ಥಿತಿ ಇಲ್ಲಿದೆ. ಪಡುಪೆರಾರ ಗ್ರಾಮ ಪಂಚಾಯತ್ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಬಹುದು. ಜಾಗ ಇದ್ದರೆ ಕಟ್ಟಡವನ್ನು ಸರಕಾರದ ಯೋಜನೆ, ದಾನಿಗಳ ಸಹಾಯ ಹಾಗೂ ನರೇಗಾ ಯೋಜನೆಯಡಿಯಲ್ಲಿ ಮಾಡಬಹುದಾಗಿದೆ ಎನ್ನು ತ್ತಾರೆ ಸ್ಥಳೀಯರು.
ಅಧ್ಯಕ್ಷರಿಗೆ ಮಾಹಿತಿ ಇಲ್ಲವಂತೆಪಡುಪೆರಾರದ ಗ್ರಾಮದ ಅಂಗನವಾಡಿ ಕೇಂದ್ರ ಬಜಪೆ ಖಾಸಗಿ ಕಟ್ಟಡ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆಯಲ್ಲ ಈ ಬಗ್ಗೆ ಏನಂತೀರಿ ಎಂದು ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಅವರನ್ನು ಪ್ರಶ್ನಿಸಿದರೆ, ಈ ಬಗ್ಗೆ ತನಗೆ ಮಾಹಿತಿ ಇಲ್ಲ. ಉಪಾಧ್ಯಕ್ಷ ನೂರ್ ಅಹ್ಮದ್ ಅವರಲ್ಲಿ ಕೇಳಿ. ಅದು ಅವರ ವಾರ್ಡ್ ಎನ್ನುತ್ತಾರೆ. ಬಾಡಿಗೆ ಪಾವತಿ
ಜಾಗಕ್ಕಾಗಿ ಹಲವಾರು ವರ್ಷಗಳ ಹಿಂದೆ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ಗೆ ಅರ್ಜಿ ನೀಡಿದ್ದೇವೆ. ಇನ್ನೂ ಆಗಿಲ್ಲ ಎನ್ನುತ್ತಾರೆ. ಈ ಕಟ್ಟಡ ಮೊದಲಿಗೆ ಬಾಡಿಗೆ ಇಲ್ಲದೇ ಉಚಿತವಾಗಿ ನೀಡಲಾಗಿತ್ತು. ಆದರೆ ಈಗ ಬಾಡಿಗೆ ಪಾವತಿಸಲಾಗುತ್ತಿದೆ.
– ಶೋಭಾ, ಅಂಗನವಾಡಿ ಕಾರ್ಯಕರ್ತೆ ಹಲವು ಬಾರಿ ಮನವಿ
ಈ ಅಂಗನವಾಡಿ ನಿರ್ಮಾಣಕ್ಕೆ ಅನೇಕ ಬಾರಿ ವಿಎ ಹಾಗೂ ಕಂದಾಯ ನಿರೀಕ್ಷಕ ರಿಗೆ ಜಾಗ ನೀಡಲು ಮನವಿ ಮಾಡ ಲಾಗಿದೆ. ಆದರೆ ಈ ಪ್ರದೇಶದಲ್ಲಿ ಸರಕಾರಿ ಜಾಗ ಇಲ್ಲದಿರುವುದರಿಂದ ಯಾರಾದರೂ ಜಾಗ ದಾನ ಮಾಡಲು ಮುಂದಾದರೆ ಕಟ್ಟಡ ನಿರ್ಮಾಣ ಮಾಡಲು ಸಾಧ್ಯ.
– ಶ್ಯಾಮಲಾ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ, ಗ್ರಾಮಾಂತರ ಸುಬ್ರಾಯ ನಾಯಕ್, ಎಕ್ಕಾರು