ಮಳೆಯಿಂದಾಗಿ ಉಡುಪಿಗೆ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿಲ್ಲವಾದರೂ, ದಿನಂಪ್ರತಿ ಕುಸಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಮಳೆ ಬಳಿಕ 4ಸೆ.ಮೀ.ಗೆ ಇಳಿದ ನೀರಿನ ಕುಸಿತ ಅಣೆಕಟ್ಟಿನಲ್ಲಿ ಸಾಮಾನ್ಯವಾಗಿ ದಿನಕ್ಕೆ ನೀರಿನ ಮಟ್ಟ 6 ಸೆ.ಮೀ.ನಷ್ಟು ಕಡಿಮೆಯಾಗುತ್ತಿತ್ತು. ಮಳೆ ಬಳಿಕ ಇದು 4 ಸೆ.ಮೀ.ಗೆ ಕುಸಿದಿದೆ. ಆರಂಭದ ದಿನಗಳಲ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿವ ಪ್ರಮಾಣ 2 ಸೆ.ಮೀ. ಇದ್ದರೆ, ಬಳಿಕ 4ರಿಂದ 6 ಸೆ.ಮೀ.ಗೆ ಏರುತ್ತದೆ. ಇದು 8 ಸೆ.ಮೀ.ವರೆಗೂ ಏರುತ್ತದೆ. ಆದರೆ ಅಕಾಲಿಕ ಮಳೆ ಮುಂದುವರಿದರೆ, ನಗರದಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದು.
Advertisement
ಮಾಣೈನಿಂದ ಡ್ರೆಜ್ಜಿಂಗ್ಕಳೆದ ವರ್ಷ ಡ್ರೆಜ್ಜಿಂಗ್ ನಡೆಸಲಾಗಿತ್ತು. ಆದರೆ ಅದನ್ನು ಈ ಬಾರಿ ಮತ್ತಷ್ಟು ಉತ್ತಮ ರೀತಿಯಲ್ಲಿ ಮಾಡಬೇಕು ಮತ್ತು ಎಷ್ಟು ಹೆಚ್ಚು ನೀರು ಸಿಗುವಂತಹ ರೀತಿಯಲ್ಲಿ ಕೆಲಸ ಮಾಡಲಾಗುತ್ತದೋ ಅದಕ್ಕೆ ತಕ್ಕಂತೆ ಬಿಲ್ ಪಾವತಿ ಮಾಡಲಾಗುವುದು ಎಂದು ಈ ಬಾರಿ ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗಿದೆ. ಕಳೆದ ವರ್ಷ ಶೀರೂರಿನಿಂದ ಡ್ರೆಜ್ಜಿಂಗ್ ಮಾಡಲಾಗಿತ್ತು. ಈ ಬಾರಿ ಮಾಣೈನಿಂದ ಬಜೆವರೆಗೆ ಡ್ರೆಜ್ಜಿಂಗ್ (ಹೂಳು ತೆಗೆಯುವುದು)ನಡೆಸಲು ಮತ್ತು ಹೊಂಡಗಳಲ್ಲಿ ತುಂಬಿದ ನೀರನ್ನು ಬಜೆಗೆ ತರುವ ಕೆಲಸ ಮಾಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಮಾತ್ರ ಮಾಡಲಾಗಿದೆ. ನೀರು ಪೂರೈಕೆ ಆರಂಭಿಸಿಲ್ಲ. ಚುನಾವಣಾ ಕರ್ತವ್ಯಕ್ಕೆ ಆಗಮಿಸಿರುವ ನೂರು ಮಂದಿ ಸೈನಿಕರು ವಾಸ್ತವ್ಯ ಇರುವ ನಗರದ ವಾಸ್ತವ್ಯ ಗೃಹಕ್ಕೆ ನಗರಸಭೆಯ ನೀರಿನ ಪ್ರಮಾಣ ಕಡಿಮೆಯಾದರೆ ಮಾತ್ರ ತುರ್ತಾಗಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಖಾಸಗಿಯವರು ಮಾತ್ರ ಖಾಸಗಿ ಬಾವಿಗಳಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಈಗ 3.95 ಮೀ. ನೀರು
ಅಣೆಕಟ್ಟಿನಲ್ಲೀಗ 3.95 ಮೀ. ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2.42 ಮೀಟರ್ ಮಾತ್ರ ನೀರಿತ್ತು. ಮಳೆ ಬರದೇ ಹೋದರೆ ಮೇ 15ರವರೆಗೆ ಮಾತ್ರ ಸಿಗಬಹುದು. ಹೋದವರ್ಷ ಫೆಬ್ರವರಿಯಲ್ಲಿಯೇ ಡ್ರೆಜ್ಜಿಂಗ್ ಮಾಡಬೇಕಾಯಿತು. ಈ ಬಾರಿಯೂ 10-12 ದಿನಗಳಲ್ಲಿ ಡ್ರೆಜ್ಜಿಂಗ್ ಮಾಡಬೇಕಾಗಬಹುದು. ಸ್ಥಳೀಯ ಪಂಚಾಯತ್‌ನವರು ಕಳೆದ ಬಾರಿ ಆಕ್ಷೇಪ ಮಾಡಿದ್ದರು. ನಮ್ಮ ದನಕರುಗಳಿಗೂ ನೀರು ಸಿಗುವುದಿಲ್ಲ ಎಂಬ ಆಕ್ಷೇಪ ಅವರದ್ದಾಗಿತ್ತು. ಈ ಬಾರಿ ಅಂತಹ ಆಕ್ಷೇಪ ಬರಲಿಕ್ಕಿಲ್ಲ ಎನ್ನುತ್ತಾರೆ ಅಧಿಕಾರಿಗಳು.
Related Articles
ಬಜೆಯಿಂದ ಪುತ್ತಿಗೆವರೆಗೆ ಡ್ರೆಜ್ಜಿಂಗ್ ಮಾಡಲಿ. ಡ್ರೆಜ್ಜಿಂಗ್‌ಗೆ ಆದರೆ ಡ್ರೆಜ್ಜಿಂಗ್ ಮಾಡಿದ ಹೂಳನ್ನು ಅಲ್ಲಿಯೇ ಹಾಕದೇ ಹೊರಗೆ ಸಾಗಿಸಬೇಕು. ಕಳೆದ ತಿಂಗಳು ಮಳೆ ಬಂದ ಪರಿಣಾಮ ಸ್ವರ್ಣ ನದಿಯಲ್ಲಿ ಸರಿಸುಮಾರು ಒಂದೂವರೆ ಅಡಿ ನೀರಿನ ಮಟ್ಟ ಹೆಚ್ಚಾಗಿದೆ. ನಗರಸಭೆಯವರು ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರೆತ್ತಿದ್ದಾರೆ.
– ಕುದಿ ಶ್ರೀನಿವಾಸ ಭಟ್,
ಉಡುಪಿ ಜಿಲ್ಲಾ ಕೃಷಿಕ ಸಂಘ
Advertisement
– ಸಂತೋಷ್ ಬೊಳ್ಳೆಟ್ಟು