Advertisement

ಭಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

03:23 PM May 16, 2022 | Team Udayavani |

ಚಿಕ್ಕಮಗಳೂರು : ಮಡಿಕೇರಿಯಲ್ಲಿ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ,   ಶಸ್ತ್ರಾಸ್ತ್ರ ತರಬೇತಿಯಲ್ಲಿ 116 ಕಾರ್ಯಕರ್ತರಿಗೆ ಶಾರೀರಿಕ, ಮಾನಸಿಕ ಸದೃಢಕ್ಕೆ ಶಿಬಿರ ಏರ್ಪಡಿಸಿದ್ದೇವು. ಬೆಳಗ್ಗೆ 4.15ರಿಂದ ರಾತ್ರಿ 10.15ರವರಗೆ ಶಿಬಿರದಲ್ಲಿ ಪಾಲ್ಗೊಂಡಿದ್ದು, ಅಲ್ಲಿ ಬಳಸಿರುವುದು ಏರ್ ಗನ್, ನಾರ್ಮ್ಸ್ ಆಕ್ಟ್ ನಲ್ಲಿ ಬರಲ್ಲ. ತ್ರಿಶೂಲವೂ ನಾರ್ಮ್ಸ್ ಆಕ್ಟ್ ನಲ್ಲಿ ಬರಲ್ಲ, ಶಾರ್ಪ್ ಇಲ್ಲ, ಧರ್ಮ ಚಿಂತನೆಯಲ್ಲಿ ಕೊಟ್ಟಿದ್ದೇವೆ ಎಂದು ಭಜರಂಗದಳ ಪ್ರಾಂತ ಸಂಚಾಲಕ ರಘು ಸಕಲೇಶಪುರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ದೇಶದ 33 ರಾಜ್ಯದ ಎಲ್ಲಾ ಕಡೆ ಪ್ರತಿವರ್ಷಈ ಶಿಬಿರ  ನಡೆಯುತ್ತಿದೆ. ಹಿಜಬ್ ಹಾಗೂ ಈ ವಿಚಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಮುಲ್ಲಾ ಕಮಿಷನರ್ ಗಾಡಿ ಮೇಲೆ ನಿಂತು ಒಬ್ಬ ಪ್ರಚೋದನೆ ಕೊಡುತ್ತಾನೆ. ಆದರೂ ಪೊಲೀಸರು ಬಂದೂಕು ಇಟ್ಕೊಂಡು ಕಾನೂನಿಗೆ ತಲೆಬಾಗಿ ಸಮಾಧಾನದಲ್ಲಿದ್ದರು. ಪಿ.ಎಫ್.ಐ, ಎಸ್.ಡಿ.ಪಿ.ಐ ಅವರಿಗೆ ಭಜರಂಗದಳದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಭಜರಂಗದಳ ಯಾವುದೇ ಕಾರಣಕ್ಕೂ ಕಾನೂನನ್ನು ಬಿಟ್ಟು ಹೋಗುವುದಿಲ್ಲ ಎಂದರು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next