Advertisement
ಬಜಪೆ ಗ್ರಾ.ಪಂ. ವ್ಯಾಪ್ತಿಯ 2018-19ನೇ ಸಾಲಿನ ಪ್ರಥಮ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ತೋಟಗಾರಿಕೆ ಇಲಾಖೆಯ ಅಧಿಕಾರಿ ಯುಗೇಂದ್ರ ಅವರ ಅಧ್ಯಕ್ಷತೆಯಲ್ಲಿ ಬಜಪೆ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ವಿಶೇಷ ಗ್ರಾಮಸಭೆಯಲ್ಲಿ ನರೇಗಾ ಯೋಜನೆಯ ತಾಲೂಕು ಸಂಯೋಜಕಿ ಧನಲಕ್ಷ್ಮೀ ಮಾಹಿತಿ ನೀಡಿ, ನರೇಗಾ ಯೋಜನೆಯಡಿ ದ್ರವತ್ಯಾಜ್ಯ ಗುಂಡಿಯನ್ನು ನಿರ್ಮಿಸಲು ಅವಕಾಶವಿದೆ. ಈ ಯೋಜನೆಯಡಿ 14 ಸಾವಿರ ರೂ. ಸಿಗುತ್ತದೆ ಈ ಬಗ್ಗೆ ಗ್ರಾಮಸ್ಥರು ಹೆಚ್ಚು ಆಸಕ್ತಿ ವಹಿಸಬೇಕು ಎಂದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಶ್ ಚೌಟ ಈ ಬಗ್ಗೆ ಪ್ರಸ್ತಾಪಿಸಿದರು.
ದಿನಕೂಲಿಯಲ್ಲಿ 500 ರೂ.ವರೆಗೆ ಏರಿಸಬೇಕು. ಸರಕಾರಿ ಶಾಲೆಗೆ ಅಲ್ಲದೇ ಅಂಗನವಾಡಿ ಆವರಣ ಗೋಡೆ ನಿರ್ಮಾಣಕ್ಕೂ ಈ ಯೋಜನೆಯಡಿ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರಿಂದ ಬೇಡಿಕೆ ಬಂದವು. ಗ್ರಾ.ಪಂ. ಸದಸ್ಯರಿಗೂ ಈ ಯೋಜನೆಯಡಿಯಲ್ಲಿ ಅವಕಾಶ ನೀಡಬೇಕೆಂಬ ಬೇಡಿಕೆಗೆ ಉತ್ತರಿಸಿದ ಸಂಯೋಜಕಿ ಧನಲಕ್ಷ್ಮೀ ಈ ಕಾಯ್ದೆಯಡಿ ಕೆಲಸ ಮಾಡಬಾರದೆಂದು ಎಲ್ಲಿಯೂ ಹೇಳಲಿಲ್ಲ ಎಂದರು. ಸಂಪನ್ಮೂಲ ವ್ಯಕ್ತಿ ರೇಖಾಮಣಿ ವರದಿ ವಾಚಿಸಿದರು. ಬಜಪೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಝಿ ಮಥಾಯಸ್, ಉಪಾಧ್ಯಕ್ಷ ಮಹಮದ್ ಶರೀಫ್, ಎಂಜಿನಿಯರ್ ಮಮತಾ, ಸಂಪನ್ಮೂಲ ವ್ಯಕ್ತಿ ಸಂಧ್ಯಾಲಕ್ಷ್ಮೀ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಾಯಿಶ್ ಚೌಟ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ವಂದಿಸಿದರು. ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.
Related Articles
ಗ್ರಾಮ ಪಂಚಾಯತ್‌ನಲ್ಲಿ ಸಕ್ರಿಯ ಉದ್ಯೋಗ ಚೀಟಿಗಳ ಸಂಖ್ಯೆ232, ಒಟ್ಟು ನೋಂದಣಿಯಾಗಿರುವ ಕುಟುಂಬ 340. ಅನುಷ್ಠಾನವಾದ ಕಾಮಗಾರಿಯ ಸಂಖ್ಯೆ 16, ಮುಕ್ತಾಯವಾದ ಕಾಮಗಾರಿಗಳ ಸಂಖ್ಯೆ 11, ಒಟ್ಟು ಮಾನವದಿನಗಳು 2,329, ಒಟ್ಟು ವೆಚ್ಚ 12,90,903 ರೂ.ಗಳು.
Advertisement