Advertisement

Baindur: ಕೆಂಪು ಕಲ್ಲು, ಮರಳು ಸಿಗದೆ ನಿರ್ಮಾಣ ಕ್ಷೇತ್ರಕ್ಕೆ ಹಿನ್ನಡೆ

04:01 PM Dec 03, 2024 | Team Udayavani |

ಬೈಂದೂರು: ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳುಗಾರಿಕೆ ಹಾಗೂ ಪೂರೈಕೆ ಸಮಸ್ಯೆಯಿಂದಾಗಿ ನಿರ್ಮಾಣ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಕೆಲವರು ಮನೆ ನಿರ್ಮಾಣದ ಕನಸನ್ನೇ ಕೈಬಿಡುವ ಸ್ಥಿತಿ ಬಂದಿದ್ದರೆ, ಕಟ್ಟಡ ನಿರ್ಮಾಣ ಕ್ಷೇತ್ರದ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಈ ಸಮಸ್ಯೆಯ ಬಗ್ಗೆ ಡಿ. 3ರಂದು ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದು, ಪರಿಹಾರದ ನಿರೀಕ್ಷೆ ಕಂಡುಬಂದಿದೆ.

Advertisement

ಏನಿದು ಕಲ್ಲು , ಮರಳಿನ ಸಮಸ್ಯೆ?
ಜಿಲ್ಲೆಯಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಹಾಗೂ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಹಸಿರು ಪೀಠ ಗಣಿಗಾರಿಕೆಗೆ ಸಂಬಂಧಿ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ತಿಂಗಳು ಟೆಂಡರ್‌ ಆದ ಬಳಿಕ ಮರಳುಗಾರಿಕೆ ಆರಂಭವಾಗಿದೆ. ಆದರೆ, 12-13 ಸಾವಿರ ರೂ.ಗಳಿಗೆ ಸಿಗುತ್ತಿದ್ದ ಮರಳಿಗೆ ಈಗ 18 ಸಾವಿರ ರೂ. ಆಗಿದೆ. ನಿತ್ಯ 150 ಲೋಡ್‌ ಬೇಡಿಕೆಯಿದ್ದರೆ 30 ಲೋಡ್‌ ಮಾತ್ರ ಸಿಗುತ್ತಿದೆ. ಆನ್‌ಲೈನ್‌ ಬುಕ್ಕಿಂಗ್‌ನಲ್ಲಿ ಸರ್ವರ್‌ ಬ್ಯುಸಿ ಅಂತ ಕಾಣುತ್ತಿದೆ. ಆದರೆ, ಹೊಂದಾಣಿಕೆಯಲ್ಲಿ ಕೆಲವೆಡೆ ಮರಳು ಪೂರೈಕೆ ನಡೆಯುತ್ತಿದೆ ಎಂಬ ದೂರುಗಳಿವೆ.

ಜಿಲ್ಲೆಯಲ್ಲಿ ತುಂಡು ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಅನುಮತಿ ಪಡೆದು ದೊಡ್ಡ ಕೋರೆ ನಿರ್ಮಿಸಿದ ಪ್ರಕರಣಗಳು ಲೋಕಾಯುಕ್ತ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸ್ಥಗಿತವಾಗಿದೆ. ಈ ಕಾರಣಗಳಿಂದ ನಿರ್ಮಾಣ ಕಾಮಗಾರಿಕೆ ಹೊಡೆತ ಬಿದ್ದಿದೆ.

ಪ್ರತಿಭಟನೆಗೆ ಸಿದ್ಧತೆ
10-15 ಲಕ್ಷ ರೂ. ಖರ್ಚು ಮಾಡಿ ಪರವಾನಿಗೆ ಪಡೆಯುವುದು ಕಷ್ಟ. ಪರವಾನಿಗೆ ಪಡೆದ ಭೂಮಿಯಲ್ಲಿ ಕಲ್ಲು ದೊರೆಯುವ ಸ್ಪಷ್ಟತೆಯಿಲ್ಲ. ಈ ಕುರಿತು ಎಲ್ಲ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಕಲ್ಲುಕೋರೆ ಮಾಲಕರು, ಚಾಲಕರ ಸಂಘದ ವತಿಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು.
-ದಿವಾಕರ ಶೆಟ್ಟಿ ನೆಲ್ಯಾಡಿ, ಅದ್ಯಕ್ಷರು ಬೈಂದೂರು ಕಲ್ಲುಕೋರೆ ಮಾಲಕರ ಸಂಘ

ಸರಕಾರದಿಂದ ದಿವ್ಯ ನಿರ್ಲಕ್ಷ್ಯ
ಪರಿಸರ ಉಳಿಸುವ ಬದ್ಧತೆ ಎಲ್ಲರಿಗೂ ಇದೆ. ಕಾನೂನುಗಳು ಪ್ರಾಂತೀಯವಾಗಿ ಸಮಸ್ಯೆಯಾದಾಗ ಅದರ ತಿದ್ದುಪಡಿ ಸರಕಾರ ಜವಾಬ್ದಾರಿ. ಆದರೆ ಉಡುಪಿ ಜಿÇÉೆಯ ಸಮಸ್ಯೆ ಬಗ್ಗೆ ರಾಜ್ಯ ಸರಕಾರ ದಿವ್ಯ ನಿರ್ಲಕ್ಷ ಮಾಡಿದೆ. ಉಸ್ತುವಾರಿ ಸಚಿವರು ಸಮಸ್ಯೆಯೇ ಗಮನದಲ್ಲಿಲ್ಲ ಎನ್ನುತ್ತಾರೆ. ಇಲ್ಲಿನ ವಾಸ್ತವತೆ ಅರಿತು ಇರುವ ಅವಕಾಶದಲ್ಲಿ ಅನುಮತಿ ನೀಡಬೇಕು. ಈ ಕುರಿತು ನಿಯೋಗ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು.
– ಗುರುರಾಜ ಗಂಟಿಹೊಳೆ, ಶಾಸಕರು ಬೈಂದೂರು

Advertisement

ಮುಖ್ಯಮಂತ್ರಿಗಳ ಜತೆ ಸಭೆ
ಬೇಸಗೆ ಸಮೀಪಿಸಿದರೂ ಕೂಡ ಕೆಂಪುಕಲ್ಲು ಪೂರೈಕೆಯಾಗದೆ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿರುವ ಕುರಿತು ಸಾರ್ವಜನಿಕರ ಬೇಡಿಕೆಯಂತೆ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಡಿ. 3ರಂದು ಮಂಗಳವಾರ ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಯುತ್ತಿದೆ ಮತ್ತು ಸಮಸ್ಯೆ ಬಗೆಹರಿಯಲಿದೆ ಎಂದು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next