ಅಜೆಕಾರು,ಜೂ. 20: ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಮುಖ ಸಿಬಂದಿ ಕೊರತೆಯಿದ್ದು ಆಸ್ಪತ್ರೆಯ ವೈದ್ಯರೇ ಎಲ್ಲ ಕೆಲಸವನ್ನು ನಿರ್ವಹಿಸುವ ಸನ್ನಿವೇಶ ಸೃಷ್ಟಿಯಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರೂ ಸೇರಿ ಒಟ್ಟು 14 ಹುದ್ದೆಗಳಿದ್ದು ಡಾಕ್ಟರ್ 1, ಸ್ಟಾಫ್ನರ್ಸ್ 1, ಫಾರ್ಮಸಿಸ್ಟ್ 1, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು 5, ಕ್ಲರ್ಕ್ 1, ಲ್ಯಾಬ್ ಟೆಕ್ನೀಷಿಯನ್ 1, ಕಿರಿಯ ಆರೋಗ್ಯ ಸಹಾಯಕ 1, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ 1, ಗ್ರೂಪ್ ಡಿ ನೌಕರರು 2 ಹುದ್ದೆ ಇದೆ. ಇದರಲ್ಲಿ ಪ್ರಮುಖ ಹುದ್ದೆಗಳಾದ ಫಾರ್ಮಸಿಸ್ಟ್ ಹಾಗೂ ಕ್ಲರ್ಕ್ ಹುದ್ದೆಗಳು ಕಳೆದ 6 ವರ್ಷಗಳಿಂದ ಖಾಲಿ ಇದ್ದು ತೀವ್ರ ಸಮಸ್ಯೆ ಉಂಟಾಗುತ್ತಿದೆ.
ವೈದ್ಯರಿಂದಲೇ ಕೆಲಸ:
ಫಾರ್ಮಸಿಸ್ಟ್ ಹುದ್ದೆ ಖಾಲಿ ಇರುವುದರಿಂದ ವೈದ್ಯರೇ ಇದನ್ನು ನಿಭಾಯಿಸಬೇಕಾಗಿದೆ. ರೋಗಿಗಳ ತಪಾಸಣೆಯೊಂದಿಗೆ ಔಷಧವನ್ನೂ ನೀಡಬೇಕಾಗಿದೆ. ಕ್ಲರ್ಕ್ ಹುದ್ದೆಯೂ ಖಾಲಿ ಇರುವುದರಿಂದ ನಿತ್ಯದ ವರದಿ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಬೇಕಾಗಿರುವುದರಿಂದಲೂ ವೈದ್ಯರೇ ಇದನ್ನೂ ಮಾಡಬೇಕಿದೆ. ಇನ್ನುಳಿದಂತೆ 5 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಲ್ಲಿ 2 ಹುದ್ದೆ ಖಾಲಿ ಇದೆ. ಗ್ರೂಪ್ ಡಿಯ 2 ಹುದ್ದೆಗಳಲ್ಲಿ 1 ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ.
Advertisement
6 ವರ್ಷದಿಂದ ಹುದ್ದೆ ಖಾಲಿ:
Related Articles
Advertisement
ಮೂಲ ಸೌಕರ್ಯ ಇದೆ:
ಆರೋಗ್ಯ ಕೇಂದ್ರವು ಮೂಲ ಸೌಕರ್ಯ ಒಳಗೊಂಡಿದ್ದು ಉತ್ತಮ ಕಟ್ಟಡ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಒಳಗೊಂಡಿದೆ. ಆದರೆ ಸಿಬಂದಿ ಕೊರೆತೆಯಿಂದಾಗಿ ಸಮಸ್ಯೆ ಉಂಟಾಗಿದೆ.
5 ಉಪಕೇಂದ್ರ:
ಬೈಲೂರು ಪಾ. ಆ. ಕೇಂದ್ರ ವ್ಯಾಪ್ತಿಯಲ್ಲಿ 5 ಉಪ ಕೇಂದ್ರಗಳಿದ್ದು ಕೌಡೂರು, ಯರ್ಲಪಾಡಿಯಲ್ಲಿ ಕಟ್ಟಡವನ್ನು ಹೊಂದಿದ್ದರೆ ನೀರೆ, ಬೈಲೂರು, ಕಣಂಜಾರುಗಳಲ್ಲಿ ಕಟ್ಟಡವನ್ನು ಹೊಂದಿಲ್ಲ. 5 ಉಪಕೇಂದ್ರಗಳಿಗೆ ಮೂವರು ಮಾತ್ರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿದ್ದು, 2 ಹುದ್ದೆ ಖಾಲಿಯಿದೆ.
ಬೈಲೂರು ಪ್ರಾ.ಆ. ಕೇಂದ್ರಕ್ಕೆ ಗುಡ್ಡೆಯಂಗಡಿ, ಕಣಂಜಾರು, ಕೌಡೂರು, ನೀರೆ, ಬೈಲೂರು, ಯರ್ಲಪಾಡಿ, ಜಾರ್ಕಳ ಗ್ರಾಮಗಳ ರೋಗಿಗಳು ಹಾಗೂ ಕುಕ್ಕುಂದೂರಿನ ಕೆಲ ಭಾಗಗಳ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ.
ಬೈಲೂರು ಪ್ರಾ.ಆ.ಕೇಂದ್ರವು ಸುಮಾರು 8 ಗ್ರಾಮಗಳನ್ನು ಒಳಗೊಂಡಿದ್ದು ತುರ್ತು ಸಂದರ್ಭ 108 ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ಸಂಕಷ್ಟ ಪಡಬೇಕಾಗಿದೆ. ಇಲ್ಲಿನವರು ಕಾರ್ಕಳ ಅಥವಾ ಅಜೆಕಾರಿನ ಆ್ಯಂಬ್ಯುಲೆನ್ಸ್‌ಗೆ ಕಾಯಬೇಕಾಗಿದೆ. ಕಾರ್ಕಳದಿಂದ ಬೈಲೂರಿಗೆ 17 ಕಿ.ಮೀ. ದೂರವಿದ್ದರೆ ಅಜೆಕಾರಿನಿಂದ ಸುಮಾರು 25 ಕಿ.ಮೀ.ಯಷ್ಟು ದೂರವಿದೆ. ಇದರಿಂದ ತುರ್ತು ಸಂದರ್ಭ ವಿಳಂಬವಾಗುತ್ತದೆ.
ಸಿಬಂದಿ ಕೊರತೆ ಇದ್ದರೂ ಸೇವೆ:
ಆರೋಗ್ಯ ಕೇಂದ್ರದಲ್ಲಿ ಇರುವ ಸಿಬಂದಿಯನ್ನೇ ಬಳಸಿಕೊಂಡು ರೋಗಿಗಳಿಗೆ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡಲಾಗುತ್ತದೆ. ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಉಲ್ಬಣಿಸದಂತೆ ಕ್ರಮ ಕೈಗೊಳ್ಳಲಾಗಿದೆ. -ಡಾ| ಮಹಂತ್ ಹೆಗ್ಡೆ, ವೈದ್ಯರು, ಪ್ರಾ.ಆ. ಕೇಂದ್ರ ಬೈಲೂರು
ಸ್ಪಂದನೆ ಸಿಕ್ಕಿಲ್ಲ:
ಬೈಲೂರು ಪ್ರಾ.ಆ.ಕೇಂದ್ರವು ಮೂಲ ಸೌಕರ್ಯಗಳನ್ನು ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ನಿತ್ಯ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ಸಿಬಂದಿ ಕೊರತೆಯಿಂದ ಸಮಸ್ಯೆಯಾಗಿದೆ. ಹಲವು ಬಾರಿ ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. –ಮಾಲಿನಿ ಜೆ. ಶೆಟ್ಟಿ, ಅಧ್ಯಕ್ಷರು ತಾ.ಪಂ. ಕಾರ್ಕಳ
ಬೈಲೂರು ಪ್ರಾ.ಆ.ಕೇಂದ್ರವು ಸುಮಾರು 8 ಗ್ರಾಮಗಳನ್ನು ಒಳಗೊಂಡಿದ್ದು ತುರ್ತು ಸಂದರ್ಭ 108 ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ಸಂಕಷ್ಟ ಪಡಬೇಕಾಗಿದೆ. ಇಲ್ಲಿನವರು ಕಾರ್ಕಳ ಅಥವಾ ಅಜೆಕಾರಿನ ಆ್ಯಂಬ್ಯುಲೆನ್ಸ್‌ಗೆ ಕಾಯಬೇಕಾಗಿದೆ. ಕಾರ್ಕಳದಿಂದ ಬೈಲೂರಿಗೆ 17 ಕಿ.ಮೀ. ದೂರವಿದ್ದರೆ ಅಜೆಕಾರಿನಿಂದ ಸುಮಾರು 25 ಕಿ.ಮೀ.ಯಷ್ಟು ದೂರವಿದೆ. ಇದರಿಂದ ತುರ್ತು ಸಂದರ್ಭ ವಿಳಂಬವಾಗುತ್ತದೆ.
•ಜಗದೀಶ್ ರಾವ್ ಅಂಡಾರು