Advertisement

ಬೈಲಹೊಂಗಲ ಜಿಲ್ಲೆ ಆಗುವುದು ಶತಸಿದ್ಧ: ಸಚಿವ ಉಮೇಶ್ ಕತ್ತಿ

09:26 PM May 02, 2022 | Team Udayavani |

ಬೈಲಹೊಂಗಲ: ‘ಬ್ರಿಟಿಷ್ ಕಾಲದಿಂದಲೂ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ಜಿಲ್ಲಾ ಕೇಂದ್ರ ಆಗುವುದು ಶತಸಿದ್ಧ. ನಾವು ನಿಮ್ಮೊಂದಿಗೆ ಇದ್ದೇವೆ. ಜಿಲ್ಲಾ ಹೋರಾಟದ ಕೂಗು ಇನ್ನಷ್ಟು ಗಟ್ಟಿಗೊಳಿಸಿ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಸದಸ್ಯರ ನಿಯೋಗಕ್ಕೆ ಸ್ಪಷ್ಟವಾಗಿ ಹೇಳಿದರು.

Advertisement

ಪಟ್ಟಣದಿಂದ ಸಂಕೇಶ್ವರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ದು ಭೇಟಿಯಾದ ಸದಸ್ಯರೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸಿದ ಸಚಿವರು ‘ಹತ್ತು ಜನ ಶಾಸಕರು, ಮುಖಂಡರು ಒಂದೊಂದು ಕಡೆ ಸಭೆ ಮಾಡುತ್ತಿದ್ದೇವೆ. ದಯಮಾಡಿ ನೀವು ಕೂಡ ಬೈಲಹೊಂಗಲ ತಾಲ್ಲೂಕಿನಾದ್ಯಂತ ಹೋರಾಟದ ಶಕ್ತಿಯನ್ನು ಗಟ್ಟಿಯಾಗಿಸಿಕೊಂಡು ಸರ್ಕಾರದ ಗಮನಕ್ಕೆ ತಂದು ಜಿಲ್ಲಾ ಹೋರಾಟವನ್ನು ಯಶಸ್ವಿಗೊಳಿಸಿಕೊಳ್ಳಬೇಕು’ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಯಾರೂ ಬೆಳಗಾವಿ ಜಿಲ್ಲೆ ವಿಂಗಡನೆ ಮಾಡಲು ಹೊರಟ್ಟಿಲ್ಲ. ಧಾರವಾಡ, ಹಾವೇರಿ, ಗದಗ ಹೇಗೆ ಜಿಲ್ಲೆಗಳಾಗಿವೆಯೋ ಅದೇ ಮಾದರಿಯಲ್ಲಿ ಬೆಳಗಾವಿ ಮೂರು ಜಿಲ್ಲೆಯಾಗಿ ವಿಭಜನೆಗೊಳ್ಳಬೇಕು. ನಾವು ಹತ್ತು ಜನ ಶಾಸಕರು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೇವೆ. ಹಾವೇರಿ, ಗದಗ, ಧಾರವಾಡ ಜಿಲ್ಲೆಗೆ ಪ್ರತ್ಯೇಕ ೪.೫ ಕೋಟಿ ಅನುದಾನ ಬರುತ್ತದೆ. ಬೆಳಗಾವಿ ಒಂದೇ ಜಿಲ್ಲೆಗೆ ೪.೫ ಕೋಟಿ ಅನುದಾನ ಬರುತ್ತಿದ್ದು, ಜಿಲ್ಲೆಯ ಜನ ಅಭಿವೃದ್ಧಿ ದೃಷ್ಠಿಯಿಂದ ಜಿಲ್ಲೆ ವಿಭಜನೆ ಕೂಗು ಎಬ್ಬಿಸಿದ್ದಾರೆ.ಹೀಗಾಗಿ ಜಿಲ್ಲೆಯ ಒಬ್ಬ ಶಾಸಕ, ಸಚಿವನಾಗಿ ಹೋರಾಟಕ್ಕೆ ಬೆಂಬಲ ನೀಡಿದ್ದೇನೆ’ ಎಂದರು.

ಹೊಸೂರ ಗಂಗಾಧರ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ, ದೇವರಗಶೀಗಿಹಳ್ಳಿ ಮಡಿವಾಳೇಶ್ವರ ಸ್ವಾಮೀಜಿ, ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ,ಮುಖಂಡರಾದ ಮಹಾಂತೇಶ ತುರಮರಿ, ಸಿ.ಕೆ.ಮೆಕ್ಕೆದ, ಶಂಕರ ಮಾಡಲಗಿ ‘ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲು ಸಕಲ ಅರ್ಹತೆಯುಳ್ಳ ಸಮರ್ತನೆಯ ಮನವಿ ಪತ್ರ ನೀಡಿದರು.

ಮುಖಂಡರಾದ ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಉದ್ಯಮಿ ವಿಜಯ ಮೆಟಗುಡ್ಡ, ಬಸವರಾಜ ಕೌಜಲಗಿ, ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ,ಶ್ರೀಶೈಲ ಯಡಳ್ಳಿ, ರಾಜು ಕುಡಸೋಮನ್ನವರ, ಸುನೀಲ ಮರಕುಂಬಿ, ಕುಮಾರ ದೇಶನೂರ, ಎಫ್.ಎಸ್.ಸಿದ್ದನಗೌಡರ, ಸುಭಾಸ ತುರಮರಿ, ಈರಣ್ಣ ಬೆಟಗೇರಿ, ಬಿ.ಎಂ.ಚಿಕ್ಕನಗೌಡ್ರ, ಡಾ.ಮಹಾಂತೇಶ ಕಳ್ಳಿಬಡ್ಡಿ, ಶಿವಾನಂದ ಕುಡಸೋಮಣ್ಣವರ, ಮಹೇಶ
ಬೆಲ್ಲದ, ಶ್ರೀಕಾಂತ ಶಿರಹಟ್ಟಿ, ಅನಿಲ ಮೇಕಲಮರ್ಡಿ, ಬಿ.ಬಿ.ಗಣಾಚಾರಿ, ಜಗದೀಶ ಬೂದಿಹಾಳ, ಮಹಾಂತೇಶ ಮತ್ತಿಕೊಪ್ಪ, ವೀರಪಯ್ಯ ಕೋರಿಮಠ, ಪತ್ರಕರ್ತರು, ಹೋರಾಟ ಸಮಿತಿ ಸದಸ್ಯರು, ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next