Advertisement
ಜೂನ್‌ನಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇಬಾಶಿಶ್ ಚಕ್ರವರ್ತಿ ನೇತೃತ್ವದಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ತನಿಖೆಗೆ ಆದೇಶ ನೀಡಿತ್ತು. ಚಕ್ರವರ್ತಿ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದನ್ನು ಸ್ವೀಕರಿಸಿದೆ.
Related Articles
ಮತ್ತೊಂದೆಡೆ, ಮಾಜಿ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧ ಆರೋಪಗಳ ವಿರುದ್ಧ ತನಿಖೆ ನಡೆಸಲು ರಚಿಸಲಾಗಿರುವ ನ್ಯಾ.ಕೈಲಾಶ್ ಚಂಡೀವಾಲ್ ನೇತೃತ್ವದ ಸಮಿತಿ ಮುಂದೆ ಪರಂಬೀರ್ ಸಿಂಗ್ ಮಾಡಿದ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್ ಅನ್ನು ರದ್ದುಗೊಳಿಸಿದೆ ಸಮಿತಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 15 ಸಾವಿರ ರೂ. ನೀಡಿದ್ದಕ್ಕೆ, ಸೂಕ್ತ ದಾಖಲೆಗಳನ್ನು ವಕೀಲರ ಮೂಲಕ ನೀಡಿದ್ದಾರೆ. ಆಯೋಗದ ಮುಂದೆ ಮಾಜಿ ಸಚಿವ ದೇಶ್‌ಮುಖ್ ಮಂಗಳವಾರ ಹಾಜರಾಗಲಿದ್ದಾರೆ.
Advertisement