Advertisement

ಹೆರಿಗೆ ವೇಳೆ ಪತ್ನಿ ಜತೆಗಿರಲು ಜಾಮೀನು

11:29 AM Nov 23, 2018 | Team Udayavani |

ಬೆಂಗಳೂರು: ತನ್ನ ಪತ್ನಿಯ ಚೊಚ್ಚಲ ಹೆರಿಗೆ ವೇಳೆ ಆಕೆಯ ಜತೆಗಿದ್ದು, ಹುಟ್ಟುವ ಮಗುವನ್ನು ನೋಡಲು,  ಪೋಕೊÕà ಕಾಯ್ದೆಯಡಿ ಶಿಕ್ಷೆಗೊಳಗಾಗಿ ಜೈಲು ಸೇರಿರುವ ವ್ಯಕ್ತಿಯೊಬ್ಬನಿಗೆ ನಾಲ್ಕು ವಾರಗಳ ಕಾಲ ವಿಶೇಷ ಜಾಮೀನು ನೀಡುವ ಮೂಲಕ ಗುರುವಾರ ಹೈಕೋರ್ಟ್‌ ಮಾನವೀಯತೆ ಮೆರೆದಿದೆ. 

Advertisement

ಈ ಕುರಿತು  ದೇವನಹಳ್ಳಿ ಹೂಡನವಾಡಿ ವಾಸಿ ಸುರೇಂದ್ರ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಎಚ್‌.ಬಿ. ಪ್ರಭಾಕರ್‌ ಶಾಸ್ತ್ರೀ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇದೊಂದು ಅಪರೂಪದ ಪ್ರಕರಣವೆಂದು ಪರಿಗಣಿಸಿ ಹಾಗೂ ಈ ವಿಚಾರ ಬೇರೆ ಯಾವುದೇ ಪ್ರಕರಣಕ್ಕೂ “ಪೂರ್ವನಿದರ್ಶನ’ ಆಗುವಂತಿಲ್ಲ ಎಂದು ಅಭಿಪ್ರಾಯಪಟ್ಟು, ಮೇಲ್ಮನವಿದಾರನಿಗೆ ನಾಲ್ಕು ವಾರಗಳ ಸಿಮೀತ ಅವಧಿಯ ಕಠಿಣ ಶರತ್ತುಗಳ ಜಾಮೀನು ಅವಕಾಶ ನೀಡಲಾಗಿದೆ’ ಎಂದು ತೀರ್ಪು ನೀಡಿದೆ.

ತನ್ನ ಪತ್ನಿ ಚೊಚ್ಚಲ ಹೆರಿಗೆ ಕೆಲವೇ ದಿನಗಳಲ್ಲಿ ಇದೆ. ಈ ಸಂದರ್ಭದಲ್ಲಿ ಪತ್ನಿಯ ಜತೆಗಿರಲು ಸುರೇಂದ್ರ 8 ವಾರಗಳ ಜಾಮೀನು ನೀಡುವಂತೆ ಕೇಳಿದ್ದರು. ಈ ಹಿಂದೆ ಎರಡು ಬಾರಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ವಿಚಾರಣಾ ಅವಧಿಯಲ್ಲಿ ಜಾಮೀನು ಸಿಕ್ಕಾಗ ಆತ ಯಾವುದೇ ಶರತ್ತುಗಳನ್ನು ಉಲ್ಲಂ ಸಿರಲಿಲ್ಲ.

ಆತ ನ್ಯಾಯಾಲಯಕ್ಕೆ ಸಲ್ಲಿಸಿರುವ ಪತ್ನಿಯ ವೈದ್ಯಕೀಯ ತಪಾಸಣೆಯ ದಾಖಲೆಗಳ ಪ್ರಕಾರ ನ.25ಕ್ಕೆ ಹೆರಿಗೆ ದಿನಾಂಕ ನೀಡಲಾಗಿದೆ. ಹೆರಿಗೆ ಸಂದರ್ಭದಲ್ಲಿ ಆತ ಪತ್ನಿಯ ಜತೆಗಿರುವುದು ತುಂಬಾ ಅವಶ್ಯಕ ಎಂಬ ಅಂಶಗಳನ್ನು ಪರಿಗಣಿಸಿ ನ್ಯಾಯಪೀಠ ಆತನಿಗೆ 2018ರ ಡಿ.20ರವರೆಗೆ ಅವಕಾಶ ನೀಡಿ ಆದೇಶಿಸಿತು.

ಶರತ್ತುಗಳು
-50 ಸಾವಿರ ರೂ. ಮೊತ್ತದ ವ್ಯಕ್ತಿಗತ ಬಾಂಡ್‌, ಇಬ್ಬರು ಶ್ಯೂರಿಟಿ ಹಾಜರುಪಡಿಸಬೇಕು.
-ಜಾಮೀನು ಅವಧಿಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ.
-ಡಿ.21ರ ಬೆಳಿಗ್ಗೆ 11ಕ್ಕೆ ಅಧೀನ ನ್ಯಾಯಾಲಯಕ್ಕೆ ಶರಣಾಗಿ, ಶಿಕ್ಷೆಯ ಅವಧಿ ಪೂರ್ಣಗೊಳಿಸಬೇಕು.
-ನಾಲ್ಕು ವಾರಗಳ ಜಾಮೀನು, ಒಟ್ಟು ಶಿಕ್ಷೆಯ ಅವಧಿಗೆ ಅನ್ವಯವಾಗುವುದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next