Advertisement

ಜಾಮೀನು ಕೋರಿ ಹೈ ಮೆಟ್ಟಿಲೇರಿದ ಡಿ.ಕೆ. ಸುರೇಶ್‌ ಪಿಎ

12:41 PM Jul 04, 2018 | |

ಬೆಂಗಳೂರು: ನೋಟು ಅಮಾನ್ಯಿಕರಣದ ಬಳಿಕ 10 .48 ಲಕ್ಷ ರೂ. ಕಪ್ಪುಹಣ ಸಕ್ರಮಗೊಳಿಸಿಕೊಂಡ ಆರೋಪ ಪ್ರಕರಣದಲ್ಲಿ ಸಿಬಿಐನಿಂದ ಬಂಧನ ಭೀತಿ ಎದುರಿಸುತ್ತಿರುವ ಸಂಸದ ಡಿ.ಕೆ ಸುರೇಶ್‌ ಅವರ ಆಪ್ತ ಸಹಾಯಕ (ಪಿಎ) ಬಿ. ಪದ್ಮನಾಭಯ್ಯ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ ಎಂಬ ಇನ್ನಿತರೆ ಅಂಶಗಳನ್ನು ಪರಿಗಣಿಸಿ ನಿರೀಕ್ಷಣಾ ಜಾಮೀನು ನೀಡಲು ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಪ್ರಕರಣದ ಎರಡನೇ ಆರೋಪಿಯಾಗಿರುವ ಪದ್ಮನಾಭಯ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈಗಿರುವ ಆರೋಪ ಸಂಬಂಧ ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ನಿರೀಕ್ಷಣಾ ಜಾಮೀನು ನೀಡಿದರೆ ತನಿಖೆಗೆ ಸಹಕರಿಸಲಿದ್ದೇನೆ ಎಂಬ ಅಂಶಗಳ ಆಧಾರದಲ್ಲಿ ಪದ್ಮನಾಭಯ್ಯ ಜಾಮೀನು ಕೋರಿದ್ದಾರೆ. ಈ ಅರ್ಜಿ ವಿಚಾರಣೆಗೆ ಬರಬೇಕಿದೆ. 

ಕೇಂದ್ರ ಸರ್ಕಾರದ ನೋಟು ಅಮಾನ್ಯಿಕರಣದ ವೇಳೆ ರಾಮನಗರ ಕಾರ್ಪೋರೇಶನ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಬಿ.ಪ್ರಕಾಶ್‌ ಹಾಗೂ ಇತರರ ಜತೆಗೂಡಿ 10.48 ಲಕ್ಷ ರೂ. ಅಮಾನ್ಯ ನೋಟುಗಳನ್ನು ಬದಲಾಯಿಸಿಕೊಂಡ ಆರೋಪ ಸಂಬಂಧ ಏ.7.2017ರಲ್ಲಿ ಸಿಬಿಐ ಅಧಿಕಾರಿಗಳು 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಪದ್ಮನಾಭಯ್ಯ ಕೂಡ ಆರೋಪ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next