Advertisement

ಪಾಕ್ ಪರ ಘೋಷಣೆ: ಆರೋಪಿಗೆ ಭಾರತ್ ಮಾತಾ ಕೀ ಜೈ ಎಂದು ರಾಷ್ಟ್ರಧ್ವಜಕ್ಕೆ ನಮಸ್ಕರಿಸುವ ಶಿಕ್ಷೆ

12:57 PM Oct 17, 2024 | Team Udayavani |

ಜಬಲ್ಪುರ: ಭಾರತದಲ್ಲಿದ್ದುಕೊಂಡು ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನದಲ್ಲಿರುವ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ,

Advertisement

ಕೋರ್ಟ್ ಆದೇಶದಂತೆ ಆರೋಪಿ ಪ್ರತೀ ತಿಂಗಳ ಮೊದಲ ಮತ್ತು ನಾಲ್ಕನೇ ವಾರದಂದು ಭೋಪಾಲ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿರುವ ರಾಷ್ಟ್ರಧ್ವಜದ ಎದುರು ನಿಂತು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿ 21 ಬಾರಿ ನಮಸ್ಕರಿಸುವಂತೆ ಸೂಚಿಸಿದೆ.

ಏನಿದು ಪ್ರಕರಣ:
ಭೋಪಾಲ್‌ ನಿವಾಸಿಯಾಗಿರುವ ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ ಕಳೆದ ಮೇ ತಿಂಗಳಲ್ಲಿ ಪಾಕಿಸ್ತಾನ್ ಜಿಂದಾಬಾದ್… ಎಂದು ಪಾಕ್ ಪರ ಘೋಷಣೆ ಕೂಗಿದ್ದ ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಘಟನೆಗೆ ಸಂಬಂಧಿಸಿ ಈತನ ವಿರುದ್ಧ ಭೋಪಾಲ್‌ನ ಮಿಸ್ರೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು ಇದರ ಆಧಾರದ ಮೇಲೆ ಆರೋಪಿ ಫೈಜಾನ್ ನನ್ನ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ ಅಡಿಯಲ್ಲಿ ಆರೋಪ ಹೊರಿಸಲಾಯಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಪಲಿವಾಲ್‌ ಅವರು ಆರೋಪಿಗೆ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಜೊತೆಗೆ ಭದ್ರತೆ ಒದಗಿಸುವಂತೆ ಸೂಚಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

ಇದಲ್ಲದೆ, ಜಾಮೀನಿನ ಭಾಗವಾಗಿ ನ್ಯಾಯಾಲಯವು ಹಲವಾರು ವಿಶಿಷ್ಟ ಷರತ್ತುಗಳನ್ನು ವಿಧಿಸಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ತಾನು ಹುಟ್ಟಿದ ದೇಶಕ್ಕೆ ದ್ರೋಹ ಬಗೆದಿದ್ದಾನೆ ಹಾಗಾಗಿ ಆತನ ವಿಚಾರಣೆ ಮುಗಿಯುವ ವರೆಗೂ ಪ್ರತೀ ತಿಂಗಳ ಮೊದಲ ಹಾಗೂ ನಾಲ್ಕನೇ ಮಂಗಳವಾರದಂದು ಭೋಪಾಲ್ ನಲ್ಲಿರುವ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ರಾಷ್ಟ್ರಧ್ವಜದ ಎದುರು ನಿಂತು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ರಾಷ್ಟ್ರಧ್ವಜಕ್ಕೆ ಇಪ್ಪತ್ತೊಂದು ಭಾರಿ ಸುತ್ತು ಬಂದು ನಮಸ್ಕರಿಸಬೇಕು ಎಂದು ಆದೇಶಿಸಿದ್ದಾರೆ.

Advertisement

ಇದನ್ನೂ ಓದಿ: Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next