Advertisement

TDP ಮುಖ್ಯಸ್ಥ ಚಂದ್ರಬಾಬು ನಾಯ್ಡುಗೆ ಜಾಮೀನು

09:08 PM Oct 31, 2023 | Team Udayavani |

ಅಮರಾವತಿ: ಆಂಧ್ರಪ್ರದೇಶ ಕೌಶಲಾಭಿವೃದ್ಧಿ ಪ್ರಕರಣ ಸಂಬಂಧ ಜೈಲು ಸೇರಿರುವ ಟಿಡಿಪಿ ಮುಖ್ಯಸ್ಥ, ಮಾಜಿ ಸಿಎಂ ಎನ್‌.ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್‌ ಮಂಗಳವಾರ ನಾಲ್ಕು ವಾರಗಳ ಅವಧಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

Advertisement

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಕಾರಣ ಅವರಿಗೆ ಜಾಮೀನು ನೀಡುವಂತೆ ನಾಯ್ಡು ಪರ ವಕೀಲರು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಹೈಕೋರ್ಟ್‌, ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ನ.28ರಂದು ಅಥವಾ ಅದರೊಳಗೆ ರಾಜಮಹೇಂದ್ರವರಂನ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್‌ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ. ಮಾನವೀಯ ನೆಲೆಯಲ್ಲಿ ಮತ್ತು ಅರ್ಜಿದಾರರ ಆರೋಗ್ಯ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಜಾಮೀನು ನೀಡಲು ನಿರ್ಧರಿಸಲಾಗಿದೆ ಎಂದೂ ಕೋರ್ಟ್‌ ಹೇಳಿದೆ.

ಇದೇ ವೇಳೆ, ಜಾಮೀನು ಷರತ್ತಿನ ಅನ್ವಯ 1 ಲಕ್ಷ ರೂ.ಗಳ ಬಾಂಡ್‌ ಮತ್ತು ಸಮಾನ ಮೊತ್ತದ ಎರಡು ಶ್ಯೂರಿಟಿ ನೀಡುವಂತೆಯೂ ಸೂಚಿಸಿದೆ. ಜಾಮೀನು ಅವಧಿ ಮುಗಿಸಿ ವಾಪಸಾಗುವಾಗ ತಮ್ಮ ಚಿಕಿತ್ಸೆಯ ವಿವರಗಳು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದ ಆಸ್ಪತ್ರೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು, ಯಾವುದೇ ಕಾರಣಕ್ಕೂ ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಗಳು, ಸಾಕ್ಷ್ಯಗಳಿಗೆ ಬೆದರಿಕೆ ಹಾಕುವ, ಆಮಿಷವೊಡ್ಡುವ ಕೆಲಸ ಮಾಡಬಾರದು ಎಂದೂ ಷರತ್ತು ವಿಧಿಸಲಾಗಿದೆ. ಸೆ.9ರಂದು ನಾಯ್ಡು ಅವರ ಬಂಧನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next