Advertisement
ಲಾಕ್‌ಡೌನ್ ಜಾರಿಗೆ ಬಂದ ಬಳಿಕ ಅಲ್ಲಿ ಗ್ರಾಹಕರ ದಟ್ಟಣೆಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಸಗಟು ವ್ಯಾಪಾರವನ್ನು ಬೈಕಂಪಾಡಿಗೆ ಸ್ಥಳಾಂತರಿಸಲಾಗಿತ್ತು. ಜತೆಗೆ ಮಾರ್ಕೆಟ್ ಅನ್ನು ಮುಚ್ಚಿ ರಿಟೇಲ್ ವ್ಯಾಪಾರವನ್ನೂ ರದ್ದು ಪಡಿಸಲಾಗಿತ್ತು.
ಈ ನಡುವೆ ಸೆಂಟ್ರಲ್ ಮಾರ್ಕೆಟ್ ನಲ್ಲಿ ಇರುವ ಎರಡೂ ಕಟ್ಟಡ ಗಳನ್ನು ಕೆಡವಿ ಅಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ, ಸುಸಜ್ಜಿತ ಮಾರ್ಕೆಟ್ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ರಿಟೇಲ್ ವ್ಯಾಪಾರಿಗಳಿಗೆ ತಾತ್ಕಾಲಿಕ ಮಾರ್ಕೆಟ್ ಕಟ್ಟಡವನ್ನು ನಿರ್ಮಿಸಿ ಕೊಡುವ ಉದ್ದೇಶವಿದ್ದು, ಮೂರು ತಿಂಗಳಲ್ಲಿ ಇದರ ಕಾಮಗಾರಿ ಪೂರ್ತಿ ಯಾಗುವ ನಿರೀಕ್ಷೆಯಿದೆ.