Advertisement

ಶಾಸಕ ಎನ್‌.ಮಹೇಶ್‌ ಬಿಜೆಪಿ ಏಜೆಂಟ್‌

05:05 PM Nov 06, 2020 | Suhan S |

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಬಿಜೆಪಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್‌.ನಾಗಯ್ಯ ಆರೋಪಿಸಿದರು. ನಗರದಲ್ಲಿ ನಡೆದ ಬಿಎಸ್ಪಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದ ಅವರು, ಶಾಸಕ ಎನ್‌. ಮಹೇಶ್‌ ಅವರು ಬಿಜೆಪಿಗೆ ದಲಿತ ಸಮಾಜವನ್ನು ಒತ್ತೆ ಇಡುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾರ್ಯಕರ್ತರು ನಂಬಬಾರದು ಎಂದು ತಿಳಿಸಿದರು.

Advertisement

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನ ‌ ಆಗಿ ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕ ಎನ್‌.ಮಹೇಶ್‌ ಸಹ ಕಾರಣ ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಕೊಳ್ಳೇಗಾಲದ ಸಭೆಯೊಂದರಲ್ಲಿ ಬಹಿರಂಗವಾಗಿ ಹೇಳಿರುವುದು ಸಹ ಇದನ್ನು ಪುಷ್ಟೀಕರಿಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರದ ರಚನೆಗೆ ಕಾರಣವಾಗಿದ್ದು, ಅಲ್ಲದೆ ಗುಪ್ತ ಸಭೆಗಳನ್ನು ನಡೆಸಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯವತಿ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಎನ್‌.ಮಹೇಶ್‌ ಬಿಜೆಪಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕೆಲ್ಲ ಪೂರಕವಾಗಿ ಕೊಳ್ಳೇಗಾಲ ನಗರ ಸಭೆಗೆ ಬಿಎಸ್‌ಪಿಯಿಂದ ಗೆದ್ದಿದ್ದ 9 ಜನ  ‌ ಸದಸ್ಯರಲ್ಲಿ 7 ಜನ‌ ಸದಸ್ಯರನ್ನು ಹೈಜಾಕ್‌ ಮಾಡಿ ಬಿಜೆಪಿ ಗೆಲ್ಲಿಸಿದ ಎನ್‌.ಮಹೇಶ್‌, ಚಾಮರಾಜನಗರದಲ್ಲೂ ಬಿಎಸ್‌ಪಿಯಿಂದ ಗೆದ್ದಿದ್ದ ಏಕೈಕ ನಗರಸಭಾ ಸದಸ್ಯನನ್ನು ಬಿಜೆಪಿ ಬೆಂಬಲಿಸುವಂತೆ ಮಾಡಿ ಅಲ್ಲಿಯೂ ಸಹ ಬಿಜೆಪಿ ಏಜೆಂಟ್‌ರಾಗಿಕೆಲಸಮಾಡಿದ್ದಾರೆ.ಬಿಎಸ್ಪಿಯಿಂದಉಚಾ cಟಿತರಾಗಿರುವ ಮಹೇಶ್‌ಗೂ ಬಿಎಸ್ಪಿಗೂ ಸಂಬಂಧವಿಲ್ಲ ಎಂದು ಹೇಳಿದರು.

ಸಂಸದರಾದ ಶ್ರೀನಿವಾಸಪ್ರಸಾದ್‌ ಅವರಿಗೆ ನೇರವಾಗಿಶಾಸಕ ‌ ಎನ್‌.ಮಹೇಶ್‌ ಬಿಜೆಪಿಗೆ ಸೇರಿ ರಾಜಕಾರಣ ಮಾಡಲಿ. ಅದಕ್ಕಾಗಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಥವಾ ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಸಭೆಯಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷ ಎಸ್‌.ಪಿ.ಮ  ಹೇಶ್‌, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್‌ ಅಮಚವಾಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ಅರಳೀಪುರ ಮಹದೇವಸ್ವಾಮಿ, ರಂಗಸ್ವಾಮಿ ಗಾಳೀಪುರ, ಬೈರಲಿಂಗಸ್ವಾಮಿ, ಮಂಜು, ಮಹೇಶ್‌ ಹೆಬ್ಬಸೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next