ಲಕ್ನೋ: ಉತ್ತರ ಪ್ರದೇಶದ ಮುಂಬರುವ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯು (ಬಿಎಸ್‌ಪಿ) ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
“ನಮಗೆ ಯಾವುದೇ ಪಕ್ಷದ ನೆರವು ಬೇಕಿಲ್ಲ. ನಾವು ಸಮಾಜದ ಎಲ್ಲ ವಿಭಾಗದ ಜನತೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಅದು ಶಾಶ್ವತ ಮೈತ್ರಿ. ಈ ಮೈತ್ರಿಯೊಂದಿಗೇ ನಾವು 2007ರಂತೆಯೇ ಈ ಬಾರಿಯೂ ಬಹುಮತದೊಂದಿಗೆ ಗೆಲ್ಲುತ್ತೇವೆ’ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧವೂ ಹರಿಹಾಯ್ದಿದ್ದಾರೆ.
ಮತ್ತೊಂದೆಡೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಬಿಜೆಪಿ ವಿಡುದ್ಧ ಮತ್ತೆ ಗುಡುಗಿದ್ದಾರೆ.
ಇದನ್ನೂ ಓದಿ:ಜಿಲ್ಲಾದ್ಯಂತ ಆರಂಭಗೊಂಡ ಅಂಗನವಾಡಿ
ಲಖೀಂಪುರ ಖೇರಿ ಪ್ರಕರಣದಲ್ಲಿ ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ಸುಪ್ರೀಂ ನೀಡಿರುವ ಆದೇಶದ ಬಗ್ಗೆ ಮಾತನಾಡಿರುವ ಅಖೀಲೇಶ್, “ಸುಪ್ರೀಂ ಕೋರ್ಟ್‌ಗೆ ಬಿಜೆಪಿ ಬಗ್ಗೆ ನಂಬಿಕೆಯಿಲ್ಲ. ದೆಹಲಿ, ಲಕ್ನೋ ಮತ್ತು ಲಖೀಂಪುರ ಖೇರಿಯ ಬಿಜೆಪಿ ಇಂಜಿನ್‌ಗಳು ಸೇರಿಕೊಂಡು ನ್ಯಾಯಾಂಗವನ್ನೇ ಹಾಳು ಮಾಡಲು ಪ್ರಯತ್ನಿಸುತ್ತಿವೆ’ ಎಂದರು.