ಅಮರೇಂದ್ರ ಬಾಹುಬಲಿ, ದೇವಸೇನಾ, ಆವಂತಿಕಾ… ಇವರೆಲ್ಲ “ಬಾಹುಬಲಿ’ ಚಿತ್ರದ ಪರದೆಯ ಮೇಲೆ ಕಂಡಂಥ ಮುಖಗಳು. ಈಗ ಇವರೆಲ್ಲ ಜೆ.ಪಿ. ನಗರದ ಸಿಂಧೂರ್ ಕನ್ವೆನÒನ್‌ಗೆ ಸೆಂಟರ್‌ಗೆ ಬಂದಿದ್ದಾರೆ! ಇಲ್ಲಿನ ಕೈಮಗ್ಗದ ಮೇಳದಲ್ಲಿನ ಸೀರೆಗಳಲ್ಲಿ ಬಾಹುಬಲಿಯ ಪಾತ್ರಗಳ ಚಿತ್ರಗಳನ್ನು ಕಾಣಬಹುದು. ಜೂ.7ರಂದು ಚಂದನವನದ ತಾರೆ ಮಿಲನಾ ನಾಗರಾಜ್ ಉದ್ಘಾಟಿಸಿರುವ ಈ ಕೈಮಗ್ಗದ ಮೇಳದಲ್ಲಿ ಹಲವು ವಿಶೇಷತೆಗಳಿವೆ. ದೇಶದ ವಿವಿಧೆಡೆಯ ಗ್ರಾಮಾಂತರ ಪ್ರದೇಶದ ನೇಕಾರರ ಕೈಚಳಕವನ್ನು ಇಲ್ಲಿ ಕಾಣಬಹುದು. ಪಶ್ಚಿಮ ಬಂಗಾಳದ ಕಾಟನ್ ಸೀರೆಗಳು ಇಲ್ಲಿಆಕರ್ಷಣೆಯ ಕೇಂದ್ರಬಿಂದು. ಹ್ಯಾಂಡ್‌ಲೂಂ ಬಟ್ಟೆಗಳಲ್ಲದೇ, ಆಭರಣಗಳು, ಕುಂದನ್, ಮೀನಾಕರಿ, ಕೈಯಿಂದ ತಯಾರಿಸಿದ ಕಾಗದ, ಹವಳ, ಪೇಂಟಿಂಗ್ಸ್, ಚರ್ಮೋತ್ಪನ್ನಗಳು, ಮರ, ದಂತ, ಗಾಜಿನಲ್ಲಿ ಕುಸುರಿ ಮಾಡಿರುವ ಅಲಂಕಾರಿಕ ವಸ್ತುಗಳು, ಕಂಚು, ಬೆಳ್ಳಿ ಮತ್ತು ಚಿನ್ನದ ಆಭರಣಗಳು ಇಲ್ಲಿರಲಿವೆ. ಅಲ್ಲದೆ, ಕರಕುಶಲ ಆಭರಣಗಳು, ಕಾಪೆìಟ್‌ಗಳು, ಡುರೀಸ್, ಮೊಜಾರಿಸ್, ಮಾರ್ಬಲ್ ಕ್ರಾಫ್ಟ್, ಗುಜರಾತಿನ ವಿಖ್ಯಾತ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥ ಬಂಧಾನಿ ಮತ್ತು ಬಂಧೇಜ್‌ನಂಥ ಕಲೆಯನ್ನು ಒಳಗೊಂಡ ವೈವಿಧ್ಯ ಬಟ್ಟೆಗಳ ಪ್ರದರ್ಶನವೂ ಇಲ್ಲಿದೆ.
ಎಲ್ಲಿ?: ಸಿಂಧೂರ್ ಕನ್ವೆನ್ಷನ್ ಸೆಂಟರ್, ಜೆ.ಪಿ. ನಗರ
ಯಾವಾಗ?: ಜೂನ್ 10-11 ಮಾಹಿತಿಗೆ: 09457955838, 9036259062