ವೇಣೂರು: ಪುಷ್ಪಗಿರಿ ಶ್ರೀ ಪ್ರಸಂಗಸಾಗರ ಮುನಿಮಹಾರಾಜರ ಚಾತುರ್ಮಾಸ್ಯ ವರ್ಷಾಯೋಗವು ಚಾತುರ್ಮಾಸ್ಯ ಸಂಕಲ್ಪದೊಂದಿಗೆ ರವಿವಾರ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಆರಂಭಗೊಂಡಿತು.
ಗುರುಪೂರ್ಣಿಮೆ ನಿಮಿತ್ತ ಗುರುಪೂಜೆ ನೆರವೇರಿಸಿ ವಿದ್ಯಾರ್ಥಿಗಳು, ಬಾಲಕ-ಬಾಲಕಿಯರಿಗೆ ಗುರುಮಂತ್ರ ಬೋಧಿಸಿ ಆಶೀರ್ವಚನ ನೀಡಿದ ಶ್ರೀ ಪ್ರಸಂಗಸಾಗರ ಮುನಿಯವರು, ಜೈನ ಧರ್ಮದಲ್ಲಿ ಅಷ್ಟಾಹಿ°ಕ ಪರ್ವದ ಅಂತಿಮ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸುತ್ತಿದ್ದು, ಭಗವಾನ್ ಮಹಾವೀರ ಸ್ವಾಮಿ ಸಮವಸರಣದಲ್ಲಿ ವಿರಾಜಮಾನವಾಗಿ ದಿವ್ಯಧ್ವನಿ ಹೊರಡಿಸಿದ ಪವಿತ್ರ ದಿನ ಗುರುಪೂರ್ಣಿಮೆಯಾಗಿರುತ್ತದೆ. ಯಾರ ಜೀವನದಲ್ಲಿ ಗುರು ಇಲ್ಲವೋ ಅವನು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ಗುರುವು ನಮ್ಮ ಪಾಲಿಗೆ ಜ್ಞಾನದ ಬೆಳಕನ್ನು ನೀಡುವವರು. ಪ್ರತಿನಿತ್ಯ ಗುರುಮಂತ್ರವನ್ನು 108 ಬಾರಿ ಜಪಿಸಿದರೆ ಸ್ಮರಣಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಮಕ್ಕಳಿಗೆ ತಂದೆ-ತಾಯಿಯವರೇ ಗುರುಗಳಾಗಬೇಕು. ಗುರು ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ ಜೀವನ ಪರಿವರ್ತನೆ ಮಾಡಬಲ್ಲರು ಎಂದು ಹೇಳಿದರು.
ಬೆಳಗ್ಗೆ ಶ್ರೀ ಪಾರ್ಶ್ವನಾಥ ಬಸದಿಯಲ್ಲಿ ಲಘುಗಣಧರ ಆರಾಧನೆ ಬಳಿಕ ಬಾಹುಬಲಿ ಸಭಾಭವನದಲ್ಲಿ ಗುರುಪೂಜೆ ನೆರವೇರಿತು. ಸಮಾರಂಭದಲ್ಲಿ ಬಾಲಬ್ರಹ್ಮಚಾರಿ ಶ್ರೀ ಸೋಮದೇವ ಬೆ„ಯ್ನಾಜಿ, ಶ್ರೀ ಶ್ರೀಕಾಂತ ಬೆ„ಯ್ನಾಜಿ ಆಶೀರ್ವಚನ ನೀಡಿದರು. ಬಾಲಬ್ರಹ್ಮಚಾರಿ ಶ್ರೀ ಧರ್ಮನಾಥ ಬೆ„ಯ್ನಾಜಿ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಆಚರಣೆ ಸಮಿತಿಯ ಅಧ್ಯಕ್ಷ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲ, ಜಿ.ಪಂ. ಸದಸ್ಯ ವಿ. ಪದ್ಮಶೇಖರ ಜೈನ್, ಉದ್ಯಮಿ ಧನ್ಯ ಕುಮಾರ್ ರೈ ಬಿಳಿಯೂರುಗುತ್ತು, ಪುಷ್ಪರಾಜ ಹೆಗ್ಡೆ, ಜಯಕೀರ್ತಿ ಜೈನ್, ಉದಯಕುಮಾರ್ ಕಟ್ಟೆಮನೆ, ಡಾ| ಶಾಂತಿಪ್ರಸಾದ್, ಉದಯ ಕುಮಾರ್ ಸೇಮಿತ, ಪ್ರಸನ್ನ ಆರ್. ಹೆಗ್ಡೆ, ಪ್ರವೀಣ್ ಪಡಿವಾಳ್, ಶರ್ಮಿತ್ ಕುಮಾರ್, ಸುಧೀರ್ ಕುಮಾರ್, ಪ್ರಮೋದ್ ಕುಮಾರ್, ಡಾ| ಅಶೋಕ್, ಭರತ್ ಆರಿಗ, ಸ್ವಪ್ನ, ಪ್ರಿಯದರ್ಶಿನಿ, ಪೂರ್ಣಿಮಾ ಹಾಗೂ ಮತ್ತಿತರರು ಹಾಜರಿದ್ದು ಸಹಕರಿಸಿದರು.
ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ, ಜೈನ್ ಮಿಲನ್, ಯುವಜನ ಸಂಘ, ಮಹಿಳಾ ಸಂಘದ ಸದಸ್ಯರು ಸಹಕರಿಸಿದರು.
ಡಾ| ಬಿ.ಪಿ. ಇಂದ್ರ ಸ್ವಾಗತಿಸಿ ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.