Advertisement

“ಬಾಹುಬಲಿ’ನಟಿ ತಮನ್ನಾಗೆ ಚಪ್ಪಲಿ ಎಸೆತ

07:00 AM Jan 29, 2018 | Team Udayavani |

ಹೈದರಾಬಾದ್‌: “ಬಾಹುಬಲಿ’ ಚಿತ್ರದ ನಟಿ ತಮನ್ನಾ ಭಾಟಿಯಾ ಅವರ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿರುವ ಘಟನೆ ಹೈದರಾಬಾದ್‌ನಲ್ಲಿ ಭಾನುವಾರ ನಡೆದಿದೆ. ಇಲ್ಲಿನ ಆಭರಣ ಮಳಿಗೆ  ಉದ್ಘಾಟಿಸಲು ನಟಿ ತಮನ್ನಾ ಬಂದಿದ್ದಾಗ ಈ ಘಟನೆ ನಡೆದಿದೆ. ಬಿ.ಟೆಕ್‌ ಪದವೀಧರ, 31 ವರ್ಷದ ಕರೀಮುಲ್ಲಾ ಎಂಬಾತನೇ ಚಪ್ಪಲಿ ಎಸೆದಾತ. ಆದರೆ, ಅದು ಗುರಿ ತಪ್ಪಿ ನಟಿಯ ಪಕ್ಕದಲ್ಲಿ ನಿಂತಿದ್ದ ಸಿಬ್ಬಂದಿಯ ಮೈಮೇಲೆ ಬಿದ್ದಿದೆ. ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ನಟಿಯ ಇತ್ತೀಚಿನ ಪಾತ್ರಗಳು ನೀರಸವಾದ್ದರಿಂದ ಈ ಕೃತ್ಯವೆಸಗಿದ್ದಾಗಿ ಆತ ಹೇಳಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next