ವಾಷಿಂಗ್ಟನ್/ಮನಾಮಾ: ಬಹರೈನ್ ಪ್ರಧಾನಮಂತ್ರಿ, ದೊರೆ, ಶೇಖ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲೀಫಾ(84ವರ್ಷ( ಅವರು ನಿಧನರಾಗಿರುವುದಾಗಿ ಬುಧವಾರ(ನವೆಂಬರ್ 10, 2020) ಅರಮನೆ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಶೇಖ್ ಖಲೀಫಾ ಅವರು ಬುಧವಾರ ಬೆಳಗ್ಗೆ ಅಮೆರಿಕದ ಮೇಯೋ ಕ್ಲಿನಿಕ್ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ಬಹರೈನ್ ನ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ದೇಶದಲ್ಲಿ ಒಂದು ವಾರಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ಬಹರೈನ್ ಪ್ರಧಾನಮಂತ್ರಿ, ದೊರೆ, ಶೇಖ್ ಖಲಿಫಾ ಬಿನ್ ಸಲ್ಮಾನ್ ಅವರು ಸತತ ಐದು ದಶಕಗಳ ಕಾಲ ದೊರೆಯಾಗಿ, ಪ್ರಧಾನಿಯಾಇ ಕಾರ್ಯನಿರ್ವಹಿಸಿದ್ದರು. 1970ನೇ ಇಸವಿಯಿಂದ ದೊರೆಯಾಗಿ ಕಾರ್ಯನಿರ್ವಹಿಸಿದ್ದು, 1971ರ ಆಗಸ್ಟ್ 15ರಂದು ಬಹರೈನ್ ಸ್ವಾತಂತ್ರ್ಯ ಪಡೆದಿತ್ತು.
ಇದನ್ನೂ ಓದಿ:ಪಚ್ಚನಾಡಿಯಲ್ಲಿ 1,500 ಕಿಲೋ ಪ್ಲಾಸ್ಟಿಕ್‌ನಿಂದ ಸಿದ್ಧವಾದ ಮನೆ! ರಾಜ್ಯದಲ್ಲಿಯೇ ಮೊದಲ ಪ್ರಯೋಗ
ಆ ಬಳಿಕ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಶೇಖ್ ಖಲಿಫಾ ಇಡೀ ವಿಶ್ವದಲ್ಲಿಯೇ ಅತೀ ದೀರ್ಘಾ ಕಾಲಾವಧಿಯ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಹೆಗ್ಗಳಿಕೆ ಅವರದ್ದಾಗಿದೆ. ದೊರೆ ಖಲೀಫಾ ಅವರು ಬಹರೈನ್ ನಲ್ಲಿ ಜನಿಸಿದ್ದರು. ಸಲ್ಮಾನ್ ಇಬನ್ ಹಮಾದ್ ಅಲ್ ಖಲೀಫಾ ಅವರ ಎರಡನೇ ಪುತ್ರರಾಗಿದ್ದಾರೆ.