Advertisement

ವೆಂಕಟೇಗೌಡನ ಕೆರೆಗೆ ಬಾಗಿನ ಅರ್ಪಣೆ

11:34 AM Nov 28, 2020 | Suhan S |

ರಾಮನಗರ: ರಸ್ತೆ, ಚರಂಡಿ ದುರಸ್ತಿ, ನಿರ್ಮಾಣ, ಇ-ಖಾತೆ ಸಮಸ್ಯೆಗಳ ಬಗ್ಗೆ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಶಾಸಕಿ ಅನಿತಾ ಕುಮಾರ ಸ್ವಾಮಿ ಅವರನ್ನು ಆಗ್ರಹಿಸಿದರು.

Advertisement

ಈ ವ್ಯಾಪ್ತಿಯಲ್ಲಿ ಅವರು ಪ್ರವಾಸ ಕೈಗೊಂಡು ಗ್ರಾಮಸ್ಥರ ಅಹವಾಲು ಆಲಿಸಿದರು. ಕೂನಗಲ್‌ ಗ್ರಾಮದಲ್ಲಿ ಚರಂಡಿ, ಬೆಟ್ಟದ ರಸ್ತೆ ಅಭಿವೃದ್ಧಿ, ಜವಳಗೆರೆದೊಡ್ಡಿ ಗ್ರಾಮದಲ್ಲಿ ವೆಂಕಟೇಗೌಡನ ಕೆರೆ ಕೋಡಿ ಹರಿಯವ ಸ್ಥಳಕ್ಕೆ ತಡೆಗೋಡೆ, ದಾಸರಹಳ್ಳಿ, ದಾಸೇಗೌಡನದೊಡ್ಡಿ, ತುಂಬೇನಹಳ್ಳಿಗ್ರಾಮಗಳಲ್ಲಿ ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿ,ಇರುಳಿಗರದೊಡ್ಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರತೆರೆಯಲು ನಾಗರಿಕರು ಆಗ್ರಹಿಸಿದರು. ತಮ್ಮ ನಾಯಕನಹಳ್ಳಿ ಕಾಲೋನಿಯ ನಾಗರೀಕರು ಇ ಖಾತಾ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ತುಂಬೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ಕಸಬಾ, ಕೂಟ ಗಲ್‌ ಮತ್ತು ಕೈಲಾಂಚ ಹೋಬಳಿಗಳಲ್ಲಿ ಪ್ರವಾಸ ಕೈಗೊಂಡಿರುವುದಾಗಿ, ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಜವಳಗೆರೆದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಇದೇ ಗ್ರಾಮದಲ್ಲಿರುವ ವೆಂಕಟೇಗೌಡನ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಶಾಸಕರು ಬಾಗಿನ ಅರ್ಪಿಸಿದರು. ತಾ. ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌, ರಾಜ್ಯ ಜೆಡಿಎಸ್‌ ವಕ್ತಾರ ಬಿ. ಉಮೇಶ್‌, ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ. ರಾಜಣ್ಣ, ತಾಪಂ ಸದಸ್ಯ ಲಕ್ಷ್ಮೀ ಕಾಂತ್‌, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ಅಶ್ವಥ್‌, ಪ್ರಚಾರ ಸಮಿತಿ ಅಧ್ಯಕ್ಷ ಆರ್‌. ಪಾಂಡುರಂಗ, ಕಂಟ್ರಾಕ್ಟರ್‌ತುಂಬೇನಹಳ್ಳಿ ಪ್ರಕಾಶ್‌, ಗ್ರಾಪಂ ಮಾಜಿ ಸದಸ್ಯ ಶಿವರಾಜು, ಮುಖಂಡರಾದ ಎಂ.ಪಿ. ವಾಸುಪುಟ್ಟಮಾಸ್ತಿಗೌಡ, ಜೈಕುಮಾರ್‌, ಮೂಗೂರಯ್ಯ, ಯಕ್ಷರಾಜು, ಹರೀಶ್‌, ಗೋಪಿ ಗ್ರಾಪಂ ಪಿಡಿಒ ಬಿ.ಪಿ.ಕುಮಾರ್‌, ಉಪ ತಹಶೀಲ್ದಾರ್‌ ಲಿಯಂ,ಗ್ರಾಮಲೆಕ್ಕಿಗೆ ಸುಖನ್ಯ, ಬೆಸ್ಕಾಂ ಜೆಇ ಸಂಜಯ್‌ ಬೇಗೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next