Advertisement

ಭಗತ್‌ಸಿಂಗ್‌ ಅಪ್ರತಿಮ ಹೋರಾಟಗಾರ: ನರೇಂದ್ರ

02:51 PM Sep 28, 2020 | Suhan S |

ಆನೇಕಲ್‌: ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿ ಕಾರಿ ಮಹಾನ್‌ ದೇಶ ಭಕ್ತ ಭಗತ್‌ಸಿಂಗ್‌ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಭಗತ್‌ ಸಿಂಗ್‌ ಓಪನ್‌ ರೋವರ್‌ ತಂಡದ ನಾಯಕ ಎ.ಎನ್‌. ನರೇಂದ್ರಕುಮಾರ್‌ ಹೇಳಿದರು.

Advertisement

ಪಟ್ಟಣದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಭಗತ್‌ ಸಿಂಗ್‌ ಅವರ 113ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಬ್ರಿಟಿಷರ ಕಪಿ ಮುಷ್ಟಿಯಿಂದ ದೇಶ ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಭಗತ್‌ಸಿಂಗ್‌ ಯುವ ಜನತೆಗೆ ಪ್ರೇರಣೆ ಎಂದರು.

5 ನೇ ವರ್ಷದಲ್ಲೇ ಬತ್ತದ ಬದಲು ಬಂದೂಕು ನೆಟ್ಟು ಬಂದೂಕು ಬೆಳೆದು ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಅದನ್ನು ಬಳಸಿಕೊಳ್ಳಬೇಕೆಂದು ತಮ್ಮ ತಾತನ ಬಳಿ ಹೇಳಿಕೊಂಡಿದ್ದ ಭಗತ್‌ ಸಿಂಗ್‌ 23ನೇ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾನ್‌ ದೇಶ ಭಕ್ತ ಎಂದು ಸ್ಮರಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಸಂಘಟಕಕೆ.ಟಿ. ಮಲ್ಲೇಶಪ್ಪ,ಕಬ್‌ ಮಾಸ್ಟರ್‌ ಎನ್‌.ಪ್ರೇಮ್‌ ಕುಮಾರ್‌, ರೋವರ್‌ಗಳಾದ ಬಿ.ಅಶೋಕ್‌, ಆದಿತ್ಯಾ, ಸಿ.ಎನ್‌. ಪವನ್‌, ಆರ್‌.ಚರಣ್‌, ರೇಂಜರ್‌ಗಳಾದ ರಕ್ಷಿತಾ, ಪ್ರೀತು, ವೇದಶ್ರೀ, ಅಖೀಲ, ಎ.ಎನ್‌. ನೀರಜ್‌ ಕುಮಾರ್‌, ಎ.ಎನ್‌.ಗುರುತೇಜ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next