Advertisement

Bagalkote; ಬಾಗಿಲು ತೆರೆಯದ‌ ಮಹಿಳೆ: ಆ್ಯಸಿಡ್ ಎರಚಿದ ಪ್ರೇಮಿ!

09:47 PM May 28, 2024 | Team Udayavani |

ಬಾಗಲಕೋಟೆ : ಮದುವೆಯಾದ ಪತ್ನಿ ಅಥವಾ ಪತಿಯನ್ನು ಬಿಟ್ಟು, ತಾವು ಇಷ್ಟಪಡುವ ಮಹಿಳೆ, ವ್ಯಕ್ತಿಯೊಂದಿಗೆ ವಾಸಿಸುವ ಲಿವಿಂಗ್ ಟುಗೆದರ್ ಎಂಬ ಸಂಸ್ಕೃತಿ ಬಾಗಲಕೋಟೆಗೂ ಕಾಲಿಟ್ಟಿದೆ. ಹೌದು, ಈ ಲಿವಿಂಗ್ ಟುಗೆದರ್ ಪದ್ಧತಿಯಂತೆ ಒಂದೇ‌ ಮನೆಯಲ್ಲಿ ವಾಸವಿದ್ದ ವ್ಯಕ್ತಿ, ತನ್ನೊಂದಿಗೆ ಇದ್ದ ಮಹಿಳೆ, ರಾತ್ರಿ ಬಾಗಿಲು ತೆರೆಯದ ಕಾರಣ, ಆಕೆಯ ಮೇಲೆ ಆ್ಯಸಿಡ್ ಎರಚಿದ ಘಟನೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಮಂಗಳವಾರ  ನಡೆದಿದೆ.

Advertisement

ಓರ್ವ ಹೆಣ್ಣು ಮಗು ಇರುವ ಲಕ್ಷ್ಮಿ ಬಡಿಗೇರ ಎಂಬ ಮಹಿಳೆ, ತಾನು ಮದುವೆ ಮಾಡಿಕೊಂಡಿದ್ದ ಗಂಡನ ಬಿಟ್ಟು  ಮಗಳೊಂದಿಗೆ ವಾಸವಿದ್ದರು. ಆಗ ಪತ್ನಿಯ ಬಿಟ್ಟು ಒಬ್ಬಂಟಿಯಾಗಿದ್ದ ಮೌನೇಶ ಪತ್ತಾರ ಪರಿಚಯವಾಗಿದ್ದ. ಇಬ್ಬರೂ ಪರಸ್ಪರ ಒಪ್ಪಿ, ಒಂದೇ ಮನೆಯಲ್ಲಿ ವಾಸವಿದ್ದರು. ಈ ವೇಳೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಲಕ್ಷ್ಮಿ‌ ಮೇಲೆ ಸಂಶಯ ಪಟ್ಟು ಜಗಳ ತಗೆಯುತ್ತಿದ್ದ. ಜಗಳ ವಿಕೋಪಕ್ಕೆ ತೆರಳಿದ್ದರಿಂದ ಒಂದು ವಾರದಿಂದ‌ ಮೌನೇಶ ಮನೆಬಿಟ್ಟು ಹೋಗಿದ್ದ.

ಬೇಸರಗೊಂಡಿದ್ದ ಮಹಿಳೆ‌ ಆತನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳು. ಇಂದು ರಾತ್ರಿ ಮೌನೇಶ ಮನೆಗೆ ಬಂದಾಗ ಬಾಗಿಲು ತೆರೆದಿರಲಿಲ್ಲ. ಇದರಿಂದ‌ ಸಿಟ್ಟಿಗೆದ್ದ ಮೌನೇಶ, ಕಿಡಕಿ ಒಡೆದು ಮಹಿಳೆಗೆ ನೀರು ಮಿಶ್ರಿತ ಆ್ಯಸಿಡ್ ಎರಚಿದ್ದಾನೆ.‌ ಆಗ ಮಹಿಳೆಯ ಮುಖಕ್ಕೆ ಹಾಗೂ ಅವಳ 8 ವರ್ಷದ ಮಗಳಿಗೆ ಗಾಯವಾಗಿದೆ.

ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆ‌ ಮತ್ತು ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮೌನೇಶನನ್ನು ಪೊಲೀಸರು ಬಂಧಿಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next