Advertisement

Bagalkote; ಜಾತಿಗೊಂದು ಡಿಸಿಎಂ ಹುದ್ದೆ ಬೇಕು: ಸಚಿವ ರಾಜಣ್ಣ

04:27 PM Jun 23, 2024 | Team Udayavani |

ಬಾಗಲಕೋಟೆ: ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಕೆಲವು ಜಾತಿಗೆ ಆದ್ಯತೆ ನೀಡಲಯ ಸಮುದಾಯ ಆಧಾರಿತ ಡಿಸಿಎಂ ಹುದ್ದೆ ನೀಡಬೇಕು ಎಂಬುದು ನಮ್ಮ ಪ್ರಬಲ ಬೇಡಿಕೆ ಇದ್ದೇ ಇದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿಸಿಎಂ ಹುದ್ದೆ ಆಕಾಂಕ್ಷಿ ಅಲ್ಲ. ಮುಂದೆ ನಾನು ಚುನಾವಣೆಗೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಚುನಾವಣಾ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ರಾಜ್ಯದಲ್ಲಿ ಸಮುದಾಯ ಆಧಾರಿತ ಡಿಸಿಎಂ ಹುದ್ದೆಯ ಬೇಡಿಕೆ ಲೋಕಸಭೆ ಚುನಾವಣೆಗೂ ಮುಂಚೆ ಇತ್ತು. ಹಿಂದೆ ಬಿಜೆಪಿಯಲ್ಲಿ ಎರಡು ಡಿಸಿಎಂ ಹುದ್ದೆ ನೀಡಲಾಗಿತ್ತು. ಆ ಹುದ್ದೆ ಬಿಟ್ಟರೆ ಬೇರೇನೂ ಕೊಡಬೇಕಿಲ್ಲವಲ್ಲ. ಎಲ್ಲ ಸಮುದಾಯದ ತಮ್ಮವರಿಗೆ ಹುದ್ದೆ ಸಿಗಬೇಕು ಎಂಬ ಆಸೆ ಇರುತ್ತದೆ. ಲಿಂಗಾಯತ, ಅಲ್ಪ ಸಂಖ್ಯಾತರು, ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಡಿಸಿಎಂ ಹುದ್ದೆ ಬೇಕು ಎನ್ನುವ ಕೂಗು ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next