Advertisement

Bagalkote: ಹೋರಾಟಗಾರರ ತ್ಯಾಗ-ಬಲಿದಾನ ಸ್ಮರಣೀಯ

04:47 PM Aug 16, 2023 | Team Udayavani |

ಬಾಗಲಕೋಟೆ: ಭಾರತ ದೇಶವು ವಿವಿಧ ಕ್ಷೇತ್ರದಲ್ಲಿಅಗಾಧವಾದ ಸಾಧನೆ ಮಾಡುತ್ತ ದಾಪುಗಾಲಿಡುತ್ತಿದೆ. ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಕಾರಣ ಎಂದು ವಿಜಯಪುರ-ಬಾಗಲಕೋಟೆ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕಿ ಅನಿತಾ
ಹದ್ದನ್ನವರ ಹೇಳಿದರು.

Advertisement

ನವನಗರದ ಸೆಕ್ಟರ್‌ ನಂ. 34ರ ಜೀವೇಶ್ವರ ಗುಡಿ ಹತ್ತಿರ ವೈಷ್ಣೋದೇವಿ ಕ್ರಿಯೇಷನ್‌ದಿಂದ ಸೋಮವಾರ ಮಧ್ಯರಾತ್ರಿ 12ಕ್ಕೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಇಂದು ದೇಶದ ಬೆಳವಣಿಗೆಗೆ ವಿಜ್ಞಾನ ತಂತ್ರಜ್ಞಾನ, ಶಿಕ್ಷಣ, ಅಂತರಿಕ್ಷೆಯಾನ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಯೋಗ ಹೀಗೆ ಹಲವಾರು ಕ್ಷೇತ್ರದಲ್ಲಿ ವಿಶ್ವವೇ ತಿರುಗಿ ಭಾರತದತ್ತ ನೋಡುವಂತೆ ಬೆಳವಣಿಗೆ ಹೊಂದಲಾಗಿದೆ. ಆದರೆ, ಸ್ವತಂತ್ರ್ಯ ಸಿಕ್ಕು
77 ವರ್ಷಗಳಾದರೂ ಭಾರತ ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಹೆಣ್ಣುಕ್ಕಳ ಮೇಲೆ ಹತ್ಯಾಚಾರ ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ.

ಇಂದು ಭ್ರಷ್ಟಾಚಾರ ತಾಂಡವಾಡುತ್ತಿದೆ. ಅದರ ಕಡಿವಾಣಕ್ಕೆ ಲೋಕಾಯುಕ್ತ ಇಲಾಖೆಯ ಜತೆಗೆ ಜನರು ಕೈಜೋಡಿಸಬೇಕು ಎಂದರು. ಗದಗದ ಎಡೆಯೂರು ಶ್ರೀ ಜದ್ಗುರು ತೋಂಟದಾರ್ಯ ಸಂಸ್ಥಾಮಠದ ಡಾ|ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಈ ಸ್ವಾತಂತ್ರ್ಯ ನಮಗೆ ಸುಮ್ಮನೆ ಸಿಕ್ಕಿಲ್ಲ. ಅದಕ್ಕೆ ದೇಶಭಕ್ತರ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ ಸ್ವಾತಂತ್ರ್ಯ ದಿನವಾಗಿದೆ. ಇಂತಹ ಸ್ವಾತಂತ್ರ್ಯ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಿದೆ ಎಂದರು.

ಚಿತ್ರ ನಿರ್ಮಾಪಕ ಘನಶ್ಯಾಂ ಭಾಂಡಗೆ ಪ್ರಸ್ತಾವಿಕ ಮಾತನಾಡಿದರು. ಹಿರಿಯ ಚಿತ್ರ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಧ್ವಜಾರೋಹಣ ಮಾಡಿದರು. ಘನಶ್ಯಾಂ ಭಾಂಡಗೆ ಒಬ್ಬ ಕ್ರಿಯಾಶೀಲ ವ್ಯಕ್ತಿ. ಅವರು ಇಂತಹ ಅದ್ಬುತವಾದ ಮಧ್ಯರಾತ್ರಿ
ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮ ಆಯೋಜನೆ ಮಾಡಿ, ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಸ್ಮರಣೀಯವಾಗಿದೆ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಯರನಾಳದ ವಿರಕ್ತಮಠದ ಗುರುಸಂಗನ ಬಸವ ಸ್ವಾಮೀಜಿ, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿವೈಎಸ್ಪಿ ಪುಷ್ಪಲತಾ, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ, ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ
ಎಸ್‌.ಜಿ.ನಂಜಯ್ಯನಮಠ, ಮುಖಂಡ ನಾಗರಾಜ ಹದ್ಲಿ, ಕಿರುತೆರೆ ನಟರಾದ ಗಣೇಶರಾವ್‌ ಕೇಸರಕರ, ವೆಂಕಟೇಶ ಬಿ.ಎಂ, ನಟಿ ಸಾಕ್ಷಿ ಮೇಘನಾ, ಸಂತೋಷ ಐಹೊಳೆ, ಶ್ರೀನಿವಾಸ, ರಾಘವೇಂದ್ರ ಬಿಸನಾಳ, ಉಮೇಶ ಬರಗುಂಡಿ, ಮಹಬೂಬ್‌, ಆನಂದ ಮುಂತಾದವರು ಪಾಲ್ಗೊಂಡಿದ್ದರು.

ಮಧ್ಯರಾತ್ರಿ ಸ್ವತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮದ ಮೊದಲು ನಟರಾದ ಕಿರುತೆರೆ ನಟರಾದ ಗಣೇಶರಾವ್‌ ಕೇಸರಕರ, ವೆಂಕಟೇಶ ಬಿ.ಎಂ ಅವರು ತಮ್ಮ ಪಾತ್ರದ ಡೈಲಾಗ್‌ ಹೇಳಿ ಜನರನ್ನು ಮನರಂಜಿಸಿದರು.ನಂತರ ಸುರೇಶ
ಓಶಿಯನ್‌ ಡ್ಯಾನ್ಸ್‌, ಫಿಟ್ನೇಸ್ ಸ್ಟುಡಿಯೊ, 3ಡಿ ಡ್ಯಾನ್ಸ್‌‌ ಅಕಾಡೆಮಿ, ಜೂನಿಯರ್‌ ಯಶ್‌, ರಾಕಿಂಗ್‌ಸ್ಟಾರ್‌ ಮೆಲೋಡಿಸ್‌ ಕಲಾ ತಂಡ, ನಿಹಾರಿಕಾ ಬರಗುಂಡಿ ತಂಡ ಸೇರಿದಂತೆ ಅನೇಕ ಕಲಾ ತಂಡಗಳು ದೇಶಭಕ್ತಿ ಗೀತೆ ಗಾಯನ, ನೃತ್ಯ ಮಾಡಿ ಮನರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next