Advertisement

Bagalkote: ಸೇವಂತಿಗೆ ಹೂ ರೈತರ ಆರ್ಥಿಕ ಅಭಿವೃದ್ಧಿ ಬೆಳೆ

04:46 PM Nov 13, 2023 | Team Udayavani |

ಬಾಗಲಕೋಟೆ: ಬಿಳಿ ಮತ್ತು ಹಳದಿ ಬಣ್ಣಗಳಲ್ಲಿದ್ದ ಸೇವಂತಿಗೆ ಇಂದು ಆಧುನಿಕ ತಾಂತ್ರಿಕತೆಯ ಫಲವಾಗಿ ಬಣ್ಣಬಣ್ಣದ
ಹೂಗಳಲ್ಲಿ ಅರಳಿ ನೋಡುಗರ ಕಣ್ಮನ ಸೆಳೆಯುತ್ತಿವೆ ಎಂದು ಪ್ರಭಾರಿ ಕುಲಪತಿ ಹಾಗೂ ಶಿಕ್ಷಣ ನಿರ್ದೇಶಕ ಡಾ|ಎನ್‌.ಕೆ. ಹೆಗಡೆ ಹೇಳಿದರು.

Advertisement

ನಗರದ ಹೊರವಲಯದಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿನೂತನವಾದ ಸೇವಂತಿಗೆ ಬೆಳೆ ಕ್ಷೇತ್ರೋತ್ಸವ
ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ಕಾಲದಲ್ಲಿ ಕೇವಲ ಸಂರಕ್ಷಿತ ಬೆಳೆಯಾಗಿದ್ದ ಸೇವಂತಿಗೆ ಇಂದು ಬಾಹ್ಯ ವಾತಾವರಣದಲ್ಲಿಯೂ ಕೂಡ
ಬೆಳೆಯಬಹುದಾಗಿದೆ. ನವೆಂಬರ್‌ದಿಂದ ಜನವರಿಯಲ್ಲಿ ಹೆಚ್ಚು ಹೂವು ಬಿಡುವ ಇದು ರೈತರಿಗೆ ಆರ್ಥಿಕ ಬೆಳೆಯಾಗಿದೆ ಎಂದರು.

ಕ್ಷೇತ್ರೋತ್ಸವ ಎಂಬುದು ಬೆಳೆಯ ಪ್ರಾತ್ಯಕ್ಷಿಕೆ, ವಿಜ್ಞಾನಿಗಳು ಮತ್ತು ರೈತರ ಜೊತೆಗೆ ಚರ್ಚೆ ಆದರೆ ಉತ್ತಮ ಫಲಿತಾಂಶ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ತೋವಿವಿಯ ವಿಜ್ಞಾನಿಗಳು ರೈತರಿಗೆ ಸಲಹೆ ಸೂಚನೆಗಳನ್ನು ನೀಡಲು ಸದಾ ಸಿದ್ಧವಾಗಿದ್ದಾರೆ ಎಂದು ತಿಳಿಸಿದರು.

ತೋಟಗಾರಿಕೆ ಕಲೇಜಿನ ಡೀನ್‌ ಡಾ|ಬಾಲಾಜಿ ಕುಲಕರ್ಣಿ ಮಾತನಾಡಿ, ರೈತರಿಗೆ ಕೊರತೆ ಇರುವ ಕೃಷಿಭೂಮಿ, ನೀರು ಮತ್ತು ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ತಮ್ಮ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಪುಷ್ಪಕೃಷಿ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

Advertisement

ವಿಸ್ತರಣಾ ನಿರ್ದೇಶಕ ಹಾಗೂ ಡೀನ್‌, ವಿದ್ಯಾರ್ಥಿ ಕಲ್ಯಾಣ ಡಾ|ಕೆ. ರಾಮಚಂದ್ರ ನಾಯ್ಕ ಮಾತನಾಡಿ, ಇಂತಹ ವಿಶೇಷವಾದ
ಕ್ಷೇತ್ರೋತ್ಸವಗಳನ್ನು ಮಾಡಿ ರೈತರಿಗೆ ಪ್ರಯೋಜನ ನೀಡುವುದು ನಮ್ಮ ತೋವಿವಿಯ ಕರ್ತವ್ಯವಾಗಿದೆ. ಇಂದಿನ ಆಧುನಿಕ
ತಾಂತ್ರಿಕತೆಯ ಕಾರಣಗಳಿಂದ 10 ಗುಂಟೆ ಕೃಷಿಭೂಮಿಯನ್ನು 5 ಎಕರೆಗಳಷ್ಟು ಬೆಳೆಸಿಕೊಳ್ಳಬಹುದಾಗಿದೆ ಎಂದರು.

ಇದೇ ವೇಳೆ ಪುಷ್ಪಕೃಷಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳನ್ನು ಡಾ| ಸತೀಶ ಪಾಟೀಲ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಪುಷ್ಪಕೃಷಿ ವಿಭಾಗ, ಡಾ|ವಸೀಮ್‌. ಎಂ.ಎ., ಸಹಾಯಕ ಪ್ರಾಧ್ಯಾಪಕರು, ಕೀಟಶಾಸ್ತ್ರ, ತೋವಿಶಿಘ ಹಾಗೂ ಡಾ| ನೂರುಲ್ಲಾ ಹಾವೇರಿ, ಸಹಾಯಕ ಪ್ರಾಧ್ಯಾಪಕರು, ಸಸ್ಯರೋಗಶಾಸ್ತ್ರ, ತೋಮವಿ ಇವರು ನೀಡಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ರೈತರು ಉಪಸ್ಥಿತರಿದ್ದರು.

ತೋವಿವಿಯ ರೈತ ವಿಕಾಸ ಭವನ ಮುಖ್ಯಸ್ಥ ಡಾ|ವಸಂತ ಗಾಣಿಗೇರ, ತೋವಿವಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತರಣಾ ಮುಂದಾಳು ಹಾಗೂ ಡಾ| ಶಶಿಕುಮಾರ .ಎಸ್‌. ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next