Advertisement

Bagalkote: ಧರ್ಮ ಪ್ರತಿಯೊಬ್ಬರ ಆಸ್ತಿಯಾಗಲಿ: ಸಚಿವ ತಿಮ್ಮಾಪುರ

04:40 PM Dec 29, 2023 | Team Udayavani |

ಗುಳೇದಗುಡ್ಡ: ಎಲ್ಲ ಮಠಗಳು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಪರಿಸರ ನಿರ್ಮಾಣ ಮಾಡಬೇಕು. ಆ ಹೆಜ್ಜೆಯನ್ನು ಶ್ರೀಮಠ ಮಾಡುತ್ತಿದೆ. ಜಾತಿ ಧರ್ಮ ಮೀರಿ ಶರಣ ಧರ್ಮ ಪ್ರಸಾರ ಮಾಡುವಲ್ಲಿ ಶ್ರೀ ಗುರುಸಿದ್ದೇಶ್ವರ ಬೃಹನ್ಮಠ ಮಹೋನ್ನತ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿ 38ನೇ ವಾರ್ಷಿಕ
ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶ್ರೇಣಿಕೃತ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಮೇಲ್ಜಾತಿಯವರು ಜಾತಿ, ಧರ್ಮದಲ್ಲಿ ಮೇಲು ಕೀಳುಗಳೆನ್ನುತ್ತಿದ್ದಾರೆ. ಧರ್ಮ ಎಲ್ಲರ ಆಸ್ತಿಯಾಗಬೇಕು. ಅದು ಯಾ ವುದೊಂದು ಪಕ್ಷದ ಆಸ್ತಿಯಾಗಬಾರದು. ಇಂದು ಜಾತಿ ಧರ್ಮದ ಸಂಘರ್ಷ ಹೆಚ್ಚಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಶ್ರೀ ಗುರುಸಿದ್ದೇಶ್ವರ ಬೃಹನ್ಮಠ ಸರ್ವ ಜನಾಂಗದವರ ಶಾಂತಿಯ ತೋಟವಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಉಪನ್ಯಾಸ ನೀಡಿ, ಜಾತಿ, ಧರ್ಮ ಮೀರಿ ಎಲ್ಲ ಜಾತಿ ಜನಾಂಗದವರನ್ನು ಒಪ್ಪಿ ಅಪ್ಪಿಕೊಂಡು ಸುಂದರ, ಸೌಹಾರ್ದಯುತ ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾದ ಶ್ರೀಮಠದ ಸಮಾಜಮುಖೀ, ಜಾತಿ ರಹಿತ ಕೆಲಸ ಮೆಚ್ಚುವಂತದ್ದು ಎಂದರು.

ಶಿವಶರಣ ಮಾದರ ಚೆನ್ನಯ್ಯನ ಜಯಂತಿ ಮಹೋತ್ಸವ ಆಚರಿಸಲಾಯಿತು. ಶ್ರೀ ಚಿಕ್ಕರೇವಣಸಿದ್ದ ಶಿವಶರಣ ಸ್ವಾಮೀಜಿಯವರ ಸ್ಮಾರಕ ಮಂಟಪವನ್ನು ಆಳಂದದ ಸದ್ಗುರು ರೇವಣಸಿದ್ದ ಶ್ರೀಮಠದ ಚನ್ನಬಸವ ಪಟ್ಟದೇವರು ಉದ್ಘಾಟಿಸಿದರು.

ಚಿತ್ರದುರ್ಗದ ಚಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ರಾಜಕೀಯ ನಾಯಕರಿಂದ, ಹಣ, ವಸ್ತ್ರ, ಮುಂತಾದವುಗಳನ್ನು ಪಡೆದು ಅವರನ್ನು ಅಭಿವೃದ್ಧಿ ಪರ ಪ್ರಶ್ನಿಸಲಾರದ ಸ್ಥಿತಿಗೆ ಬಂದಿದ್ದೇವೆ. ಇದರಿಂದ ನಮ್ಮ ಗ್ರಾಮಗಳು ಹಿಂದುಳಿಯಲು ಕಾರಣವಾಗಿವೆ. ಎಲ್ಲರೂ ನೈತಿಕ  ಸದೃಢತೆ ಹೊಂದಬೇಕೆಂದರು. ಪ್ರಾಧ್ಯಾಪಕ ಡಾ| ಚಂದ್ರಶೇಖರ ಹೆಗಡೆ ಸಂಪಾದಿಸಿರುವ ಶ್ರವಣೋತ್ಸವ ಪುಸ್ತಕ ಲೋಕಾರ್ಪಣೆಗೊಂಡಿತು. ಮತ್ತು ಅಖಂಡ 15ದಿನಗಳವರೆಗೆ ಪ್ರವಚನ ನೀಡಿದ ಶ್ರೀ ಅಭಿನವ ಒಪ್ಪತ್ತೇಶ್ವರ ಶ್ರೀಗಳನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Advertisement

ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಗುರುಬಸವ ದೇವರು, ಸ್ವಾಗತ ಸಮಿತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ ಬರಗುಂಡಿ, ನಾಗೇಶಪ್ಪ ಪಾಗಿ, ಗೌರಮ್ಮ ಕಲಬುರ್ಗಿ, ಪಿಎಸ್‌ಐ ಲಕ್ಷ್ಮಪ್ಪ ಆರಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next