Advertisement
ಹೌದು, ಎರಡು ದಿನಗಳ ಹಿಂದೆ ಜಿಲ್ಲೆಗೆ ಬಂದು, ರೈತರ ಸಾಲ ಮನ್ನಾ ಯೋಜನೆಯಡಿ ಋಣಮುಕ್ತ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮದಲ್ಲಿ ಯುಕೆಪಿ ಕುರಿತ ಪ್ರಸ್ತಾಪಿಸಿದ ಸಿಎಂ ಎಚ್‌ಡಿಕೆ, ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದು ತಿಳಿಸಲಿಲ್ಲ. ಕನಿಷ್ಠ ಪಕ್ಷ ಯೋಜನೆ ಕುರಿತು ಬದ್ಧತೆಯೂ ತೋರಿಸಿಲ್ಲ. ಅವರಾಡಿದ ಮಾತುಗಳಿಂದ ಯುಕೆಪಿ ಯೋಜನೆ, ಇದೇ ಸರ್ಕಾರ ಪೂರ್ಣಗೊಳಿಸುತ್ತದೆ ಎಂಬ ಆಶಾಭಾವನೆಯೂ ಈ ಭಾಗದ ರೈತರಲ್ಲಿ ಬರಲಿಲ್ಲ.
Related Articles
Advertisement
ರಾಜ್ಯದ ಬಹುದೊಡ್ಡ ಯೋಜನೆ: ಯುಕೆಪಿ, ಇದು ಬಹುದೊಡ್ಡ ನೀರಾವರಿ ಯೋಜನೆ. ಕೃಷ್ಣಾ-ಕಾವೇರಿಗೆ ಹೋಲಿಸಿದರೆ, ರಾಜ್ಯದ ಶೇ.70ರಷ್ಟು ಭೌಗೋಳಿಕ ಕ್ಷೇತ್ರ ಯುಕೆಪಿ ಹೊಂದಿದೆ. ಕೃಷ್ಣಾ ನದಿಯಲ್ಲಿ ವಾರ್ಷಿಕ 2786 ಟಿಎಂಸಿ ಅಡಿ ನೀರು ಹರಿದರೆ ಅದರಲ್ಲಿ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಹಾಗೂ ಆಂಧ್ರಕ್ಕೆ 1005 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಕೃಷ್ಣಾ ನ್ಯಾಯಾಧೀಕರಣದ ಐತೀರ್ಪಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕೃಷ್ಣಾ ನದಿಯ ಒಟ್ಟು ಉದ್ದ 2.57 ಚದರ ಕಿ.ಮೀ ಇದ್ದು, ಇದರಲ್ಲಿ ನಮ್ಮ ರಾಜ್ಯದಲ್ಲೇ ಅತಿಹೆಚ್ಚುಉದ್ದ ಹರಿದಿದೆ. ಮಹಾರಾಷ್ಟ್ರದಲ್ಲಿ 68,800 ಚ.ಕಿ.ಮೀ, ಕರ್ನಾಟಕದಲ್ಲಿ 1,12,600 ಚ.ಕಿ.ಮೀ ಹಾಗೂ ಆಂಧ್ರಪ್ರದೇಶದಲ್ಲಿ 75,600 ಚ.ಕಿ.ಮೀ ಉದ್ದ ಹರಿದಿದೆ. ಮೂರು ರಾಜ್ಯಗಳಲ್ಲಿ ಸಂಚರಿಸಿ, ಸಮುದ್ರ ಸೇರುವ ಕೃಷ್ಣೆಯ ನೀರಿನ ಸದ್ಭಳಕೆಗೆ ಈ ವರೆಗಿನ ಯಾವ ಸರ್ಕಾರವೂ ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.
ಸಂತ್ರಸ್ತರ ಗೋಳು ಕೇಳ್ತಿಲ್ಲಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಸಂತ್ರಸ್ತರ ಸಮಸ್ಯೆ ಆಲಿಸುತ್ತಿಲ್ಲ. ಈಗಾಗಲೇ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡರೂ ಅವರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ 1.23 ಲಕ್ಷ ಎಕರೆ ಭೂಮಿ ಯುಕೆಪಿ 2ನೇ ಹಂತಕ್ಕೆ ಹೋಗುತ್ತದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಏಕ ರೂಪದ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಈಗಿನ ಮೈತ್ರಿ ಸರ್ಕಾರ ಯುಕೆಪಿಯನ್ನು ನಿರ್ಲಕ್ಷ್ಯ ವಹಿಸಿದೆ.
. ಪ್ರಕಾಶ ಅಂತರಗೊಂಡ,
ಸಂತ್ರಸ್ತ ರೈತ ಮುಖಂಡ ಶ್ರೀಶೈಲ ಕೆ. ಬಿರಾದಾರ