Advertisement

Bagalkote; ಅಬ್ಬರದ ಮಳೆ: ಸಿಡಿಲು ಬಡಿದು ಯುವಕ ಸಾವು

12:22 AM May 13, 2024 | Team Udayavani |

ಬಾಗಲಕೋಟೆ : ಜಿಲ್ಲೆಯಲ್ಲಿ ರವಿವಾರ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬೇವೂರ ಗ್ರಾಮದಲ್ಲಿ ಸಂಭವಿಸಿದೆ.

Advertisement

ಮೃತಪಟ್ಟ‌ ವ್ಯಕ್ತಿಯನ್ನು ಮೂಲತಃ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ‌ ಗೋನಾಳ ಗ್ರಾಮದ ಪ್ರಕಾಶ ವಗ್ಗರ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶ್ರೀಶೈಲ ಕಲಗುಡಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಿದೆ. ಸಧ್ಯ ಗಾಯಾಳು ಯುವಕನನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಪ್ರಕಾಶ ಮತ್ತು ಶ್ರೀಶೈಲ, ಬೇವೂರ ಗ್ರಾಮಕ್ಕೆ ಬೈಕ್ ಮೂಲಕ ತೆರಳುತ್ತಿದ್ದರು.‌ ಗುಡುಗು ಸಹಿತ‌ ಮಳೆ ಬರಲಾರಂಭಿಸಿದ‌ ಕಾರಣ ರಸ್ತೆ ಪಕ್ಷದ ಮರದ ಕೆಳಗೆ ಆಸರೆ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಓರ್ವ ಯುವಕ ಸ್ಥಳದಲ್ಲೇ ಅಸುನೀಗಿದ್ದಾನೆ.

ಗೋನಾಳದ ಯುವಕ, ಬೇವೂರ ಗ್ರಾಮದಲ್ಲಿ ನೆಲೆಸಿದ್ದ ಎನ್ನಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next