Advertisement

Bagalkote: ದೇವಿ ಆರಾಧನೆಯಿಂದ ದುಷ್ಟಶಕ್ತಿ ದೂರ: ಸ್ವಾಮೀಜಿ

05:47 PM Oct 17, 2023 | Team Udayavani |

ಮಹಾಲಿಂಗಪುರ: ದೇವಿಯನ್ನು ಸ್ಮರಿಸುತ್ತಾ ತಪಸ್ಸು ಮಾಡುವುದರಿಂದ ದುಷ್ಟಶಕ್ತಿಗಳ ಕಾಟ ದೂರಾಗಿ ಆಯುಷ್ಯ, ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುವುದು ಎಂದು ಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಆರಂಭಗೊಂಡ 33ನೇ ವರ್ಷದ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿವರ್ಷ ವಿಜೃಂಭಣೆಯಿಂದ ದೇವಿ ಪುರಾಣ ಮತ್ತು ದಸರಾ ಸಾಂಸ್ಕೃತಿಕ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಒಂಭತ್ತು ದಿನಗಳ ಕಾಲ ದೇವಿಯ ಪುರಾಣ ಹೇಳಲಿರುವ ರನ್ನಬೆಳಗಲಿ ಪಟ್ಟಣದ ಮಹಾಲಿಂಗಶಾಸ್ತ್ರಿಗಳು ಚಿದಾನಂದ ಅವಧೂತರು ಬರೆದ 18 ಅಧ್ಯಾಯಗಳ ದೇವಿ ಪುರಾಣಕ್ಕೆ ಚಾಲನೆ ನೀಡಿ, ಪೀಠಿಕಾ ಅಧ್ಯಾಯವನ್ನು ವಿವರಿಸಿ ಮಾತನಾಡಿದರು.

ದೇವಿಯ ಪುರಾಣ ಓದುವುದರಿಂದ ಹಾಗೂ ಕೇಳುವದರಿಂದ ಸರ್ವ ಸಂಕಷ್ಟಗಳು ದೂರಾಗಿ ಜೀವನ ಪಾವನವಾಗುವುದು. ದೇವಿಯ ಪುರಾಣವು ದೇಹದ ಪುರಾಣವೆಂದು ತಿಳಿದು, ಒಂಭತ್ತು ದಿನಗಳ ಕಾಯ ಭಯ-ಭಕ್ತಿಯಿಂದ ದೇವಿಯನ್ನು ಆರಾಧಿಸಿ, ನಮ್ಮಲ್ಲಿರುವ ನವವಿಧ ದುಷ್ಟರನ್ನು ಸಂಹರಿಸುವ ಮೂಲಕ ಸನ್ಮಾರ್ಗದಲ್ಲಿ ನಡೆದು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಬೆಳ್ಳಿಯ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಿ, ವಿವಿಧ ಸಮಾಜಗಳ ಹಿರಿಯರ ಸಮ್ಮುಖದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಒಂಭತ್ತು ದಿನಗಳ ದೇವಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರವಚನದ ನಂತರ ಸ್ಥಳೀಯ ಬಸವಾನಂದ ಶಾಲೆ, ಜೆಸಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

ಹಿರಿಯರಾದ ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಜಕ್ಕನ್ನವರ, ಮಹಾಲಿಂಗಪ್ಪ  ಕೋಳಿಗುಡ್ಡ, ಮಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಗುರುಪಾದಯ್ಯ ಛಟ್ಟಿಮಠ, ಕುಮಾರ ಮನ್ನಯ್ಯನವರಮಠ, ಗೌಡಪ್ಪಗೌಡ ಪಾಟೀಲ, ಮಲ್ಲಪ್ಪ ಭಾಂವಿಕಟ್ಟಿ, ಡಾ| ಬಿ.ಡಿ.ಸೋರಗಾಂವಿ, ಸಿದಗಿರೆಪ್ಪ ಕಾಗಿ, ಲಕ್ಕಪ್ಪ ಚಮಕೇರಿ, ನಾರಾಯಣ ಕಿರಗಿ, ಶ್ರೀಶೈಲಪ್ಪ ಬಾಡನವರ, ಪ್ರಭು ಬೆಳಗಲಿ, ಸಂಜು ಜಮಖಂಡಿ, ಮಹಾದೇವ ಹುಣಶ್ಯಾಳ, ಈಶ್ವರ ಚಮಕೇರಿ, ಎಂ.ಎಸ್‌.ದಢೂತಿ, ಸುನೀಲ ಜಮಖಂಡಿ, ಬಸವರಾಜ ಹುಲ್ಯಾಳ, ವಿನೋದ ಚಮಕೇರಿ, ಗುರುಪಾದ ಅಂಬಿ, ಬಿ.ಸಿ. ಪೂಜಾರಿ, ಸತೀಶ ಸೋರಗಾಂವಿ, ಸಿದ್ದು ಧಡೂತಿ, ಪ್ರಕಾಶ ಬಾಡನವರ, ಅಶೋಕ ಬಾಣಕಾರ, ಸುದರ್ಶನ ಹಿಕಡಿ, ಶಿವಾನಂದ ಕಿತ್ತೂರ, ಮಂಜುನಾಥ ಭಾವಿಕಟ್ಟಿ ಇದ್ದರು.

ಕುಂಕುಮಾರ್ಚನೆ: ಮಂಗಳವಾರ ಸಂಜೆ ದೇವಿ ಪುರಾಣ ನಿಮಿತ್ತ ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದಿಂದ ದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಲಿದೆ. ಮಹಾಲಿಂಗಪುರದ ವಿ.ಕೆ. ಡ್ಯಾನ್ಸ್‌ ಮತ್ತು ಫಿಟ್‌ನೆಸ್‌ ಅಕಾಡೆಮಿಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next