ಬಾಗಲಕೋಟೆ: ಕಳೆದೆರಡು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಚಿತ್ತಿ ಮಳೆಗೆ, ರೈತ ಸಮೂಹವನ್ನು ಚಿಂತೆಗೀಡು ಮಾಡಿದೆ. ಇನ್ನೇನು ಮುಂಗಾರು ಹಂಗಾಮು ಮುಗಿದು, ಹಿಂಗಾರಿಗೆ ತಯಾರಿ ಮಾಡಿಕೊಳ್ಳುತ್ತಿದ್ದ ರೈತನಿಗೆ, ಚಿತ್ತಿ ಮಳೆಯ ರಭಸ ಹಿಂಗಾರಿ ವಿಳಂಬಕ್ಕೆ ಕಾರಣವಾಗಿದೆ.
Advertisement
ಹೌದು, ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೇ ಮಳೆ ಸುರಿಯುತ್ತಿದೆ. ಹಿಂಗಾರು ಹಂಗಾಮು ಆರಂಭಗೊಂಡಿದ್ದು, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಿದ್ದ ರೈತರಿಗೆ, ನಿರಂತರ ಮಳೆ ಅಡ್ಡಿಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 361.80 ಸಾಮಾನ್ಯ ಮಳೆ ಪ್ರಮಾಣವಿದ್ದು, ಒಟ್ಟು 384.50 ಎಂಎಂ ಮಳೆಯಾಗಿರುವುದು ದಾಖಲಾಗಿದೆ. ಪ್ರಸಕ್ತ ತಿಂಗಳಿಂದ ಹಿಂಗಾರು ಹಂಗಾಮು ಆರಂಭಗೊಂಡಿದ್ದು, ಅ.15ರ ವರೆಗೆ 55.4 ಎಂಎಂ ಮಳೆ ದಾಖಲಾಗಿದೆ. ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಹಿಂಗಾರು ಬಿತ್ತನೆಗೆ ಅವಕಾಶ ಕೊಡುತ್ತಾ ಎಂಬ ಆತಂಕದಲ್ಲಿ ರೈತ ವಲಯದಲ್ಲಿ ಆವರಿಸಿದೆ.
Related Articles
ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಸಮೀಕ್ಷೆಗೂ ಬಿಡ್ತಿಲ್ಲ ಮಳೆರಾಯ: ಪ್ರತಿದಿನವೂ ಬೆಳ್ಳಂಬೆಳಗ್ಗೆಯೇ ಶುರುವಾಗುವ ಮಳೆ, ಆಗೊಮ್ಮೆ, ಈಗೊಮ್ಮೆ ಸ್ವಲ್ಪ ಬಿಡುವು ಕೊಟ್ಟು, ಪುನಃ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಜನರು ಮನೆಯಿಂದಲೂ ಹೊರ ಬರದ ಪರಿಸ್ಥಿತಿಒಂದೆಡೆಯಾದರೆ, ಹೊಲದಲ್ಲಿ ಕಟಾವು ಮಾಡಿ ಹಾಕಿದ ಈರುಳ್ಳಿ ನೋಡಿ, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಜಿಲ್ಲೆಯ 9 ತಾಲೂಕು ಪೈಕಿ ಬಾಗಲಕೋಟೆ ಮತ್ತು ಮುಧೋಳ ತಾಲೂಕಿನಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆದಿದ್ದು, ಬಹುತೇಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ, ಬೆಳೆ ಹಾನಿ ಸಮೀಕ್ಷೆ ನಡೆಸಲೂ ಅವಕಾಶ ಸಿಗುತ್ತಿಲ್ಲ ಎನ್ನಲಾಗಿದೆ. 131 ಹೆಕ್ಟೇರ್ ಹಾನಿ: ಕಳೆದ ಎರಡು ದಿನಗಳಿಂದ ಮಳೆ ಸುರಿಯುವ ಮೊದಲು ಜಿಲ್ಲೆಯಲ್ಲಿ ಅತಿಯಾದ ಮಳೆ ಮತ್ತು ಪ್ರವಾಹದಿಂದ ಆದ ತೋಟಗಾರಿಕೆ ಬೆಳೆ ಹಾನಿ ಕುರಿತು ಅಧಿಕಾರಿಗಳು ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಪ್ರಾಥಮಿಕ ವರದಿ
ಸಲ್ಲಿಸಿದ್ದಾರೆ. ಆ ವರದಿಯ ಅನ್ವಯ ಅ.15ರ ವರೆಗೆ ಒಟ್ಟು 206 ಲಕ್ಷ ಮೊತ್ತದ 131 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ಒಟ್ಟಾರೆ, ಚಿತ್ತಿ ಮಳೆ ರೈತ ಸಮೂಹವನ್ನು ಚಿಂತೆಗೀಡು ಮಾಡಿದೆ. ಹಿಂಗಾರು ಬಿತ್ತನೆಗೆ ಸಜ್ಜಾದ ರೈತರಿಗೆ, ನಿರಂತರ ಮಳೆಯಿಂದ ಬೆಳೆಯುವ ಬೆಳೆಗಳ ಬದಲಾವಣೆಗೂ ಕಾರಣವಾಗಲಿದೆ.