Advertisement

ಬಾಗಲಕೋಟೆ: ಒಣ ಮೆನಸಿನಕಾಯಿಗೆ ಕಳ್ಳರ ಕಾಟ ತಪ್ಪಿಸಿ

06:14 PM Dec 03, 2022 | Team Udayavani |

ಬಾಗಲಕೋಟೆ: ರೈತರ ಹೊಲಗಳಲ್ಲಿ ಮೆನಸಿನಕಾಯಿ ಬಿತ್ತನೆ ಮಾಡಲಾಗಿದ್ದು ಹವಮಾನ ವೈಪರಿತ್ಯದ ಮಧ್ಯದಲ್ಲೇ ಅಳಿದುಳಿದ ಮೆನಸಿನ ಕಾಯಿಗೆ ರಾತ್ರಿ
ಸಮಯದಲ್ಲಿ ಕಳ್ಳಕಾಕರು ಹೆಚ್ಚಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ರೈತ ಮುಖಂಡ ಆರ್‌.ಎಸ್‌. ವೈಜಾಪುರ ನೇತೃತ್ವದಲ್ಲಿ ಸುಮಾರು ರೈತರು ಸೇರಿ ಗುರುವಾರ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Advertisement

ರೈತರ ಮನವಿ ಸ್ವೀಕರಿಸಿದ ಪೊಲೀಸ್‌ ಉಪಾಧೀಕ್ಷಕ ಪ್ರಭುಗೌಡ ಕಿರೇದಳ್ಳಿ ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು. ಕೂಡಲೇ ಬೇವೂರ ಹೊರ ಠಾಣೆಗೆ ಅಗತ್ಯವಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗುವುದು.ಅಗತ್ಯಬಿದ್ದರೆ ಪ್ರತಿ ಹಳ್ಳಿಗೂ ಪೊಲೀಸ್‌ ಗಸ್ತು ಒದಗಿಸುವುದಾಗಿ ತಿಳಿಸಿದರು.

ಮುಖಂಡ ಆರ್‌.ಎಸ್‌. ವೈಜಾಪುರ ಮಾತನಾಡಿ, ಹಲವು ದಿನಗಳಿಂದ ರೈತರ ಹೊಲದಲ್ಲಿನ ಪೈಪ್‌ಗ್ಳನ್ನು ಕೊಡಲಿಯಿಂದ ಕತ್ತರಿಸುತ್ತಿದ್ದಾರೆ. ಇದರಿಂದ ರೈತರಿಗೆ
ತೀವ್ರ ಹಾನಿಯಾಗುತ್ತಿದೆ. ಮೇಲಾಗಿ ಹೊಲಗದ್ದೆಗಳಿಗೆ ಒಬ್ಬರೇ ಅಡ್ಡಾಡುವುದು ಭಯ ಹುಟ್ಟಿಸಿದೆ. ಹೀಗಾಗಿ ಬೇವೂರ ಹೊರ ಪೊಲೀಸ್‌ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿ ಸೂಕ್ತ ಬಂದೋಬಸ್ತ್ ಒದಗಿಸಬೇಕು ಎಂದು ಆಗ್ರಹಿಸಿದರು.

ರೈತರಾದ ಕುಮಾರ ಬಿಂಜವಾಡಗಿ, ಎಸ್‌ .ಜಿ. ಮೆನಸಿನಕಾಯಿ, ಎಸ್‌.ಜಿ. ಶಿರೂರ, ಕೆ.ಜಿ. ಮಾಗನೂರ, ಜಿ.ಎಸ್‌. ಹುದ್ದಾರ್‌, ಎಮ್‌.ಜಿ. ಮಾಗನೂರ, ಜಿ.ಎಂ. ತುರಡಗಿ, ಎಂ.ಎಸ್‌. ಮಾಗಿ, ಜಿ.ಐ. ಬಿಂಜವಾಡಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next