Advertisement
ಮುಧೋಳದ ನಿರಾಣಿ ಶುಗರ್ಸ್ ಕಾರ್ಖಾನೆಯಲ್ಲಿ ನಡೆದ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭದನಿಮಿತ್ತ ಆಯೋಜಿಸಿದ ಸನ್ 2023-24ನೇ ಸಾಲಿನ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಖಾನೆಯಾಗಿ ಬೆಳೆದಿದೆ. ಇದಕ್ಕೆ ರೈತ ಕುಟುಂಬಗಳ ಪ್ರೀತಿ, ಅಭಿಮಾನ ಹಾಗೂ ನಿರಾಣಿ ಸಮೂಹದ ಮೇಲೆ ಅವರಿಟ್ಟ ವಿಶ್ವಾಸವೇ ಕಾರಣ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ನಿರಾಣಿ ಸಮೂಹ, ಇಂಧನ ಕ್ಷೇತ್ರದಲ್ಲಿ ದಿಟ್ಟ ಹೆಚ್ಚೆ ಇಟ್ಟಿದೆ. ಈಗಾಗಲೇ ಇಥೆನಾಲ್ ಉತ್ಪಾದನೆಯಲ್ಲಿ ನಿರಾಣಿ ಸಮೂಹ ಜಗತ್ತಿನಲ್ಲಿ ಅಗ್ರ ಸ್ಥಾನದಲ್ಲಿದೆ. ಸಾಯಿಪ್ರೀಯಾ ಶುಗರ್ಸ್ ಆವರಣದಲ್ಲಿ ಸಿಎನ್‌ಜಿ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ
ಕಾರ್ಖಾನೆಗಳಿಗೆ ಇದು ವಿಸ್ತರಣೆಯಾಗಲಿದೆ ಎಂದರು.
Related Articles
Advertisement
ಕೇವಲ 500 ಮೆಟ್ರಿಕ್ ಟನ್ ಕಬ್ಬು ನುರಿಸುವ ಕಾರ್ಖಾನೆಯಿಂದ ಆರಂಭಗೊಂಡ ನಿರಾಣಿ ಉದ್ಯಮ ಸಮೂಹ, ಇಂದುಬಾಗಲಕೋಟೆ ಜಿಲ್ಲೆಯಲ್ಲಿಯೇ ಸುಮಾರು ಆರು ಸಕ್ಕರೆ ಕಾರ್ಖಾನೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಾತ್ರ ಇದ್ದ ನಮ್ಮ ರೈತರ ಸೇವಾ ಉದ್ಯಮ, ಇಂದು ದಕ್ಷಿಣಕ್ಕೂ ವಿಸ್ತರಿಸಿದೆ. ರೈತರಿಂದ ಕಬ್ಬು ಪಡೆದು, ಬಿಲ್ ಕೊಡುವುದು ಅಷ್ಟೇ ನಮ್ಮ ಉದ್ದೇಶವಲ್ಲ.ರೈತರ ಆರ್ಥಿಕಮಟ್ಟ ಸುಧಾರಿಸಲು ನಿರಂತರ ಸಲಹೆ-ತರಬೇತಿ, ಕೃಷಿ ತಂತ್ರಜ್ಞಾನ ಅಳವಡಿಕೆ ಸಹಿತ ಎಲ್ಲ ರೀತಿಯ ರೈತಸ್ನೇಹಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ನಿರಾಣಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ,
ರೈತ ಮುಖಂಡರಾದ ವೆಂಕಣ್ಣ ಗಿಡ್ಡಪ್ಪನವರ, ಉದಯ ಸಾರವಾಡ, ಲಕ್ಷ್ಮಣ ದೊಡಮನಿ, ಗಿರಿಮಲ್ಲಯ್ಯ ಗಣಾಚಾರಿ, ಶಿವನಗೌಡ
ಪಾಟೀಲ, ಭರಮು ಉಳ್ಳಾಗಡ್ಡಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮುತ್ತಪ್ಪ ಗಣಿ, ಸಿದ್ದಪ್ಪ ಕಡಪಟ್ಟಿ, ಸದಾಶಿವ ಕದಂ, ಸತ್ಯಪ್ಪ ಅಂತಾಪುರ ಮುಂತಾದವರು ಪಾಲ್ಗೊಂಡಿದ್ದರು. ಕಳೆದ 25 ವರ್ಷಗಳಲ್ಲಿ ನಿರಾಣಿ ಸಮೂಹ ದೇಶದ ಅತಿ ಚಿಕ್ಕ ಕಾರ್ಖಾನೆಯಿಂದ ಆರಂಭಗೊಂಡು, ಇಂದು ದೇಶದ ದೊಡ್ಡ ಕಾರ್ಖಾನೆಯಾಗಿ ಬೆಳೆದಿದೆ. ಇದಕ್ಕೆ ರೈತ ಕುಟುಂಬಗಳ ಪ್ರೀತಿ, ಅಭಿಮಾನ ಹಾಗೂ ನಿರಾಣಿ ಸಮೂಹದ ಮೇಲೆ ಅವರಿಟ್ಟ ವಿಶ್ವಾಸವೇ ಕಾರಣ.
ಡಾ| ಮುರುಗೇಶ ನಿರಾಣಿ, ಮಾಜಿ
ಸಚಿವರು ಹಾಗೂ ಸಂಸ್ಥಾಪಕ ಅಧ್ಯಕ್ಷರು,
ಎಂಆರ್‌ಎನ್ ಉದ್ಯಮ ಸಮೂಹ