Advertisement

Bagalkote: ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಒಂದಾದ 9 ‌ದಂಪತಿ

05:12 PM Dec 14, 2023 | Team Udayavani |

ಬಾಗಲಕೋಟೆ: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ 9 ದಂಪತಿಗಳು ರಾಷ್ಟ್ರೀಯ ಲೋಕ್‌ ಅದಾಲತ್‌ ನಲ್ಲಿ ಒಂದಾಗುವ ಮೂಲಕ ಹೊಸ ಜೀವನಕ್ಕೆ ನಾಂದಿ ಹಾಡಿದರು.

Advertisement

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ವಿಜಯ ನೇರಳೆ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕುಟುಂಬ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೋರಿ 9 ಜೋಡಿಗಳು ಅರ್ಜಿ ಸಲ್ಲಿಸಿದ್ದರು. ಸಂಧಾನದಲ್ಲಿ ತಮ್ಮ ತಪ್ಪನ್ನು ಅರಿತು ಒಟ್ಟಿಗೆ ಬಾಳುವ ಸಂಕಲ್ಪ ಮಾಡಿ, ಹೊಂದಾಣಿಕೆಯಿಂದ
ಜೀವನ ನಡೆಸುವುದಾಗಿ ತಿಳಿಸಿದರು.

ಬಾಗಲಕೋಟೆ ನ್ಯಾಯಾಲಯದಲ್ಲಿ 1, ಜಮಖಂಡಿ 1, ಬಾದಾಮಿ 3, ಮುಧೋಳ 2 ಹಾಗೂ ಬನಹಟ್ಟಿ ಕೋರ್ಟ್‌ ನಲ್ಲಿ 2 ಸೇರಿ ಒಟ್ಟು 9 ಜೋಡಿಗಳು ವಿಚ್ಛೇದನ ಹಿಂಪಡೆದು ಒಂದಾಗಿದ್ದಾರೆ. ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ
ಲೋಕ ಅದಾಲತ್‌ನಲ್ಲಿ ಬಾಕಿ ಇರುವ 8033 ಮತ್ತು 11534 ವಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 19567 ಪ್ರಕರಣಗಳನ್ನು ವಿಚಾರಣೆಗಾಗಿ ತೆಗೆದುಕೊಳ್ಳಲಾಗಿತ್ತು. ಈ ಪೈಕಿ 15962 ಪ್ರಕರಣ ಇತ್ಯರ್ಥ ಪಡಿಸಿ ರಾಜೀ ಸಂಧಾನ ಮಾಡಲಾಯಿತು. ಈ ಎಲ್ಲ ಪ್ರಕರಣಗಳಿಗೆ ಒಟ್ಟು 23.49 ಕೋಟಿ ರೂ.ಗಳಿಗೆ ರಾಜೀ ಮಾಡಿಸಲಾಯಿತು.

ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು 2646 ಪೈಕಿ 1999 ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟ್‌ನಲ್ಲಿ 414 ಪ್ರಕರಣಗಳ ಪೈಕಿ 289, ಮುಧೋಳ ಕೋರ್ಟ್‌ನಲ್ಲಿ 810 ಪ್ರಕರಣಗಳ ಪೈಕಿ 695, ಬನಹಟ್ಟಿ ಕೋರ್ಟ್‌ ನಲ್ಲಿ 828 ಪ್ರಕರಣಗಳ ಪೈಕಿ 686, ಹುನಗುಂದ ಕೋರ್ಟನಲ್ಲಿ 551 ಪೈಕಿ 372, ಇಳಕಲ್ಲ ಕೋರ್ಟ್‌ನಲ್ಲಿ 398 ಪೈಕಿ 342, ಜಮಖಂಡಿ ಕೋರ್ಟನಲ್ಲಿ 1707 ಪ್ರಕರಣಗಳ ಪೈಕಿ 1356 ಹಾಗೂ ಬಾದಾಮಿ ಕೋರ್ಟ್‌ನಲ್ಲಿ 679 ಪ್ರಕರಣಗಳ ಪೈಕಿ 483 ಪ್ರಕರಣ ಇತ್ಯರ್ಥ ಪಡಿಸಲಾಯಿತು.

ವಾಜ್ಯ ಪೂರ್ವ ಪ್ರಕರಣಗಳಲ್ಲಿ ನೀರಿನ ಬಿಲ್‌ ಮತ್ತು ಇತರೆ ಬಿಲ್‌ ಪಾವತಿಗೆ ಸಂಬಂಧಿ ಸಿದಂತೆ 1679 ಪ್ರಕರಣ ದಾಖಲಾಗಿದ್ದವು. ಈ ಪೈಕಿ 1312 ಪ್ರಕರಣಗಳನ್ನು ಇತ್ಯರ್ಥಪಡಿಸಿ 592879 ರೂ.ಗಳ ಬಿಲ್‌ ನ್ಯಾಯಾಲಯದಲ್ಲಿ ಪಾವತಿಸಿದ್ದಾರೆ. ಟ್ರಾಪಿಕ್‌ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 5382 ಸಣ್ಣ ಪ್ರಕರಣಗಳಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸಾರ್ವಜನಿಕರು 25,27,600 ರೂ.ಗಳ ದಂಡ ಪಾವತಿಸಿದ್ದಾರೆ.

Advertisement

ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಧಿ ಸಿದ 38 ಪ್ರಕರಣಗಳಲ್ಲಿ 24 ಇತ್ಯರ್ಥಗೊಂಡಿದ್ದು, 28,58,548 ರೂ.ಗಳ ದಂಡ ಪಾವತಿಸಿದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ. ಮೂಲಿಮನಿ, ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶರಾದ ಪಲ್ಲವಿ ಆರ್‌, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧಿಧೀಶೆ ಹೇಮಾ ಪಸ್ತಾಪುರ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರುಘೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್‌ .ಬಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next