Advertisement
ನಗರಸಭೆ ಆಯುಕ್ತರನ್ನಾಗಿ ರಮೇಶ ಜಾಧವ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತ್ತು. ಕಳೆದೊಂದು ವರ್ಷದಿಂದ ಆ ಹುದ್ದೆಯಲ್ಲಿದ್ದ ಆರ್.ವಾಸಣ್ಣ, ಕೆಎಟಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ವರ್ಗಾವಣೆಗೆ ನ್ಯಾಯಾಲಯ ತಡೆ ನೀಡಿದೆ ಎಂದು ಹೇಳಿರುವ ವಾಸಣ್ಣ, ಸೋಮವಾರ ಬೆಳಗ್ಗೆ 10ಕ್ಕೆ ಕಚೇರಿಗೆ ಬಂದು, ಆಯುಕ್ತರ ಕುರ್ಚಿಯಲ್ಲಿ ಕುಳಿತಿದ್ದರು.
Related Articles
Advertisement
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ವರ್ಗವಾಣೆಯಾಗಿದ್ದ ಆರ್ ವಾಸನ್, ವರ್ಗಾವಣೆ ಪ್ರಶ್ನಿಸಿ ಕೆಇಟಿ ಮೆಟ್ಟಿಲೇರಿದ್ದರು. ಕಳೆದ ಆಗಷ್ಟ ಆಗಷ್ಟ್ 12 ರಂದು ಆರ್ ವಾಸನ್ ಅವರ ವರ್ಗವಾಣೆಯಾಗಿತ್ತು. ನಂತರ ರಮೇಶ್ ಜಾಧವ್ ನಗರಸಭಾ ಆಯುಕ್ತರಾಗಿ ಸರ್ಕಾರದಿಂದ ನಿಯುಕ್ತಿಗೊಂಡಿದ್ದರು.
ಸರ್ಕಾರಿ ಆದೇಶ ತಗೆದುಕೊಂಡು ಬಂದು ಹುದ್ದೆಗೆ ಬರಲಿ ಎಂದು ಆಯುಕ್ತ ರಮೇಶ್ ಜಾಧವ್ ವಾದ ಮಾಡುತ್ತಿದ್ದಾರೆ. ಕೆಇಟಿ ಯಿಂದ ಆದೇಶ ತಗೊಂಡು ಬಂದಿರುವೆ ಎಂದು ಹಿಂದಿನ ನಗರಸಭಾ ಆಯುಕ್ತ ಆರ್ ವಾಸನ್ ಪ್ರತಿವಾದಿಸುತ್ತಿದ್ದಾರೆ.
ಒಟ್ಟಾರೆ ಇಬ್ಬರು ಅಧಿಕಾರಿಗಳ ಕುರ್ಚಿ ಕಿತ್ತಾಟ ಕಂಡು ನಗರಸಭೆ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ.