ಕೌಶಲ್ಯಯುಕ್ತವಾಗಿ ಬಳಸುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಉದ್ಯೋಗ ನಿರ್ಧರಿತವಾಗಿರುತ್ತದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದ ಹಿರೇಮಠ ಹೇಳಿದರು.
Advertisement
ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಕಾಲೇಜಿನ ಐಕ್ಯುಎಸಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಯುವಕೌಶಲ್ಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ಯಾಂಪಸ್ ಫೂಲ್ ಡ್ರೈವ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಲಿಕಾ ಹಂತದಲ್ಲಿನ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ಕೌಶಲ್ಯಯುತವಾಗಿ ಬಳಸುವ ಕಲೆ ಕರಗತ ಮಾಡಿಕೊಳ್ಳಬೇಕು. ಆ
ಕೌಶಲ್ಯಗಳೆ ನಿಮ್ಮ ಉದ್ಯೋಗ ಹುಡುಕಾಟದ ಸಂದರ್ಭದ ಸಂದರ್ಶನದ ವೇಳೆ ಸಹಾಯಕ್ಕೆ ಬರಲಿದೆ ಎಂದರು.
ತರುವ ಸಂಪನ್ಮೂಲಗಳನ್ನು ಕಂಪನಿಗಳು ಹುಡುಕುತ್ತಿರುತ್ತವೆ. ತಮ್ಮ ಕಂಪನಿಯಲ್ಲಿ ಉದ್ಯೋಗ ನೀಡಿದರೆ ಈ ಯುವಕನಿಂದ
ಎಷ್ಟು ಉಪಯುಕ್ತವಾಗಲಿದೆ ಎಂಬುದನ್ನು ತಿಳಿಯಲು ಸಂದರ್ಶನವೇ ಅತ್ಯಂತ ಮಹತ್ವದ ಹೆದ್ದಾರಿಯಾಗಿದ್ದು, ಒಟ್ಟು ಐದು
ಕಂಪನಿಗಳು ಇಲ್ಲಿ ಸಂದರ್ಶನ ಮಾಡಲಿದ್ದು, ಇಲ್ಲಿ ಕೌಶಲ್ಯಪೂರ್ಣ ಯುವ ಸಮುದಾಯಕ್ಕೆ ಇದು ಸದ್ಬಳಕೆಯಾಗಲಿ ಎಂದರು. ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಸಹಾಯಕ ಅಧಿಕಾರಿ ಕಿರಣ್ ಮಂಡಿ ಮಾತನಾಡಿ, ಜಿಲ್ಲಾ ಉದ್ಯೋಗ ವಿನಿಮಯ
ಕೇಂದ್ರಕ್ಕೆ ತನ್ನದೇ ಆದ ಇತಿಹಾಸವಿದ್ದು, ಉದ್ಯೋಗ ಹುಡುಕುತ್ತಿರುವವರು ಮತ್ತು ಉದ್ಯೋಗ ನೀಡುವವರ ಮಧ್ಯದ
ಕೊಂಡಿಯಾಗಿ ಮಹತ್ವದ ಕಾರ್ಯ ಮಾಡುತ್ತದೆ. ವಿದ್ಯಾರ್ಥಿಗಳು, ಉದ್ಯೋಗ ಅರಸುತ್ತಿರುವವರು ಇಲಾಖೆಯೊಂದಿಗೆ
ಸಂಪರ್ಕ ಹೊಂದಿದರೆ ತುಂಬ ಒಳಿತು ಎಂದು ತಿಳಿಸಿದರು.
Related Articles
Advertisement
ಐಕ್ಯೂಎಸಿ ಸಂಯೋಜಕ ಡಾ|ಡಿ.ಎಸ್. ಲಮಾಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಆರ್.ಎಲ್. ಕಾತರಕಿ, ಬಿಸಿಎ ವಿಭಾಗದಮುಖ್ಯಸ್ಥ ಪ್ರವೀಣ ಅಕ್ಕಿಮರಡಿ, ವಿಭಾಗದ ತರಬೇತಿ ಮತ್ತು ನಿಯೋಜನೆ ಅಧಿಕಾರಿ ನೈನಾ ಕಲ್ಯಾಣಶೆಟ್ಟಿ ಮುಂತಾದವರು
ಉಪಸ್ಥಿತರಿದ್ದರು. ಶುಭಾ ಎಂ.ಡಿ ಅತಿಥಿಗಳನ್ನು ಪರಿಚಯಿಸಿದರು. ಶಿವಲೀಲಾ ವಡ್ಡರ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ
ಅಕ್ಕಿಮರಡಿ ವಂದಿಸಿದರು.