Advertisement
ಹಳ್ಳಿ ಜನರು ಯಾವುದೇಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೇಳಿದರೂ ದೊರೆಯುತ್ತಿಲ್ಲ. ತಾಪಂ ವ್ಯವಸ್ಥೆಗೆ ಬೆಲೆಯೇ ಇಲ್ಲದಂತಾಗಿದೆ. ತಾಪಂ ವ್ಯವಸ್ಥೆ ಬಲಪಡಿಸಿ, ಇಲ್ಲವೇ ರದ್ದುಗೊಳಿಸಿ ಬಿಡಿ. ನವನಗರದ ತಾಪಂ ಸಭಾ ಭವನದಲ್ಲಿ ನಡೆದ ಪ್ರಸಕ್ತ ಐದು ವರ್ಷದ ಆಡಳಿತ ಮಂಡಳಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಬಿಸಿ ಬಿಸಿಚರ್ಚೆ ನಡೆಯಿತು.
Related Articles
Advertisement
ತಾಲೂಕಿನಲ್ಲಿ ಬಾಲ ವಿಕಾಸ ಸಮಿತಿಗಳುಹೆಸರಿಗೆ ಮಾತ್ರ ಇವೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಂಗನವಾಡಿ ಕೇಂದ್ರಗಳಿಂದ ಸಮರ್ಪಕವಾದ ಆಹಾರ ಪೂರೈಕೆ ಆಗುತ್ತಿಲ್ಲ. ಈಬಗ್ಗೆ ಗಮನ ಹರಿಸಬೇಕು. 5 ವರ್ಷ ಅವಧಿಯಲ್ಲಿಸಾಕಷ್ಟು ಕೆಲಸ ಮಾಡಲಾಗಿದೆ. ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ ಎಂದು ಅಧ್ಯಕ್ಷ ಚನ್ನನಗೌಡಪರನಗೌಡರ ಹೇಳಿದರು.
ಕಿಚನ್ ಗಾರ್ಡನ್‌ಗೆ ಅನುದಾನ ಹೆಚ್ಚಿಸಿ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿ ಕಿಚನ್ ಕಾರ್ಡನ್ ರೂಪಿಸಲು ಕೇವಲ 1 ಸಾವಿರ ಅನುದಾನ ನಿಗದಿ ಮಾಡಿದೆ. ಈ ಅನುದಾನ ಸಾಲುತ್ತಿಲ್ಲ. ಕಿಚನ್ ಗಾರ್ಡನ್ ನಿರ್ಮಾಣಕ್ಕೆ ಅನುದಾನಹೆಚ್ಚಿಸಬೇಕು. ಕೇವಲ 1 ಸಾವಿರದಲ್ಲಿ ಕಿಚನ್ ಗಾರ್ಡನ್ ನಿರ್ಮಿಸಿ ಎಂದು ಸರ್ಕಾರ ಸೂಚಿಸಿದೆ. ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದರೆ ಅಂಗನವಾಡಿಕಾರ್ಯಕರ್ತೆಯರನ್ನು ಅಮಾನತು ಮಾಡಲಾಗುತ್ತಿದೆಎಂದು ಸದಸ್ಯ ಸಲೀಮ್ ಶೇಖ ಹೇಳಿದರು.ಸದಸ್ಯೆ ಲಕ್ಷಿ$¾à ಪೂಜಾರ ಮಾತನಾಡಿ, ಉದಗಟ್ಟಿಗ್ರಾಮದಲ್ಲಿ ಒಂದೇ ಅಂಗನವಾಡಿ ಕೇಂದ್ರದಲ್ಲಿ ಇಬ್ಬರುಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಈ ಸಮಸ್ಯೆ 5 ವರ್ಷದಿಂದ ಹೇಳಿದರೂ ಯಾರೂ ಕ್ಯಾರೇ ಅನ್ನುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಪಂ ಉಪಾಧ್ಯಕ್ಷ ಸಂಗಣ್ಣ ಮುಧೋಳ,ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಸವರಾಜಕೆಂಜೋಡಿ, ತಾಪಂ ಇಒ ಎನ್.ವೈ.ಬಸರಿಗೀಡದ,ಸದಸ್ಯರಾದ ರಾಜಶೇಖರ ಅಂಗಡಿ, ಪರಶುರಾಮಛಬ್ಬಿ, ನಿಂಗಪ್ಪ ಮಾಗನೂರ, ಇಒ ಎನ್.ವೈ.ಬಸರಿಗಿಡದ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.