Advertisement

ಸೇತುವೆಯ ತಡೆಗೋಡೆ ಕುಸಿತ : ಬಾಗಲಕೋಟೆ –ಗದಗ ಸಂಪರ್ಕ ಕಡಿತ

09:35 PM Jul 16, 2022 | Team Udayavani |

ಕುಳಗೇರಿ ಕ್ರಾಸ್ (ಬಾಗಲಕೋಟೆ) : ಕುಳಗೇರಿ ಕ್ರಾಸ್ ಬಾಗಲಕೋಟೆ-ಗದಗ ಅವಳಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಹಳೆ ರಸ್ತೆಯಲ್ಲಿರುವ ಕಿರು ಸೇತುವೆಯ ತಡೆಗೋಡೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಸದ್ಯ ವಾಹನ ಸಂಚಾರ ಸೇರಿದಂತೆ ನಿತ್ಯ ಓಡಾಡುವ ಜನರಿಗೂ ತೊಂದರೆಯಾಗಿದೆ.

Advertisement

ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು ಸುಮಾರು ಐದಾರು ತಿಂಗಳ ಹಿಂದಷ್ಟೇ ಬಾಗಲಕೋಟೆ ಜಿಲ್ಲೆಯ ಗೋವನಕೊಪ್ಪದಿಂದ ಗದಗ ಜಿಲ್ಲೆಯ ಕೊಣ್ಣೂರ ಗ್ರಾಮದವರೆಗೆ ಈ ರಸ್ತೆಗೆ ಮರು ಡಾಂಬರಿಕರಣ, ರಸ್ತೆ ರಿಪೇರಿ ಮಾಡಲಾಗಿತ್ತು. ಈ ರಸ್ತೆ ರಿಪೇರಿಗೆ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರು ಎರೆಡು ಕೋಟಿ ರೂ ಅನುದಾನ ಕೊಟ್ಟಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿ ಕಳಪೆ ನಡೆದಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಸದ್ಯ ಎರಡು ಕೋಟಿ ರೂ ಕೆಲಸ ಮಾಡಿದ ಗುತ್ತಿಗೆದಾರನು ಸಹ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡಿದ್ದಾನೆ.

ಹಳೆ ಸೇತುವೆ ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸುವಂತೆ ಕಾಮಗಾರಿ ನಡೆಯುತ್ತಿರುವಾಗಲೇ ಸಾಕಷ್ಟು ಬಾರಿ ಸಂಬಂದಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೂ ಕೇಳಿಕೊಂಡಿದ್ದಾರೆ. ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರ ಹತ್ತಿರವೂ ಗೋವನಕೊಪ್ಪ ಗ್ರಾಮಸ್ಥರು ಹೇಳಿಕೊಂಡಿದ್ದಾರೆ ಆದರೆ ಏನು ಪ್ರಯೋಜನವಾಗಿಲ್ಲ.

ಇದನ್ನೂ ಓದಿ : ಕಾಂಗ್ರೆಸ್ ಕಾರ್ಯಕರ್ತರ ಟಾರ್ಗೆಟ್ : ಠಾಣೆಯ ಮುಂದೆ ಶಾಸಕ ಅಮರೇಗೌಡ ಪಾಟೀಲ ಏಕಾಏಕಿ ಧರಣಿ

ಸದ್ಯ ಸಂಪರ್ಕ ಕಡಿತಗೊಂದಡಿದ್ದರಿಂದ ಗೋವನಕೊಪ್ಪ ಸೇರಿದಂತೆ ಸಾಕಷ್ಟು ಗ್ರಾಮಗಳಿಗೆ ತೆರಳುವ ಜನರು ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂದಿಸಿದ ಅಧಿಕಾರಿಗಳು ಗಮನ ಹರಿಸಬೇಕಿದೆ.

Advertisement

ಸದ್ಯೆ ರಾಷ್ಟ್ರೀಯ ಹೆದ್ದಾರಿಯ ಹೊಸ ಸೇತುವೆ ರಸ್ತೆ ಪ್ರವಾಹಕ್ಕೆ ಕಿತ್ತು ಹೋಗಿದ್ದರಿಂದ ಎಲ್ಲ ವಾಹನಗಳು ಹಳೆ ಸೇತುವೆ ಮೇಲೆ ಸಂಚರಿಸುತ್ತಿದ್ದವು. ಕಾರಣ ರಸ್ತೆ ಚಿಕ್ಕದಾಗಿದ್ದು ಭಾರಿ ವಾಹನ ಓಡಾಟದಿಂದ ಸೇತುವೆ ತಡೆಗೋಡೆ ಕುಸಿದಿದೆ. ಸದ್ಯ ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡದ್ದೆನೆ. ರಸ್ತೆ ಮೇಲೆ ಓಡಾಡದಂತೆ ಬಂದ್ ಮಾಡಿದ್ದೆವೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಶಿಘ್ರದಲ್ಲೇ ಸೇತುವೆ ನಿರ್ಮಿಸಿ ಸಂಚಾರಕ್ಕೆ ಅನಕೂಲ ಮಾಡಿ ಕೊಡುತ್ತೆವೆ. ನಾರಾಯಣ ಕುಲಕರ್ಣಿ ಏಇಇ ಬಾದಾಮಿ.

ನಾವು ಕಾಮಗಾರಿ ನಡೆಯುವಾಗಲೇ ಅಧಿಖಾರಿಗಳಿಗೆ ತಿಳಿಸಿದ್ದೆವೆ ಏನು ಕ್ರಮ ಕೈಗೊಳ್ಳಲಿಲ್ಲ. ಸದ್ಯೆ ನಮ್ಮ ಸುತ್ತ ಹತ್ತಾರು ಹಳ್ಳಿಯ ಜನರಿಗೆ ಹಾಗೂ ನಿತ್ಯ ಓಡಾಡುವ ನೂರಾರು ವಿದ್ಯಾರ್ಥಿಗಳಿಗೆ ಬಾರಿ ತೊಂದರೆಯಾಗಿದೆ ಆದಷ್ಟು ಬೇಗ ಸೇತುವೆ ನಿರ್ಮಿಇಸಿ ಜನರಿಗೆ ಅನಕೂಲ ಮಾಡಬೇಕು. ಗೋವನಕೊಪ್ಪ ನಿವಾಸಿ ಸಂಗಮೇಶ ಹುರಕಡ್ಲಿ.

Advertisement

Udayavani is now on Telegram. Click here to join our channel and stay updated with the latest news.

Next