Advertisement
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ರಣ ಕೇಕೆ ಹಾಕುತ್ತಿದೆ. ಪ್ರತಿದಿನ ನೂರರ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ, ಸೋಮವಾರ ರೋಬ್ಬರಿ 209 ಜನರಿಗೆ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ.
ಕಳೆದ ಒಂದು ವಾರದ ಕೋವಿಡ್ ವಿದ್ಯಮಾನ ಗಮನಿಸಿದರೆ ಜಿಲ್ಲೆಯಲ್ಲಿ ವೈರಸ್, ಸಮುದಾಯಕ್ಕೆ ವಿಸ್ತರಣೆಯಾಗಿದೆ ಎಂಬ ಮಾತು ಕೇಳಿ ಬರುತ್ತದೆ. ಹೀಗಾಗಿ ಜಿಲ್ಲಾಡಳಿತವೂ, ಜಿಲ್ಲೆಯಾದ್ಯಂತ ರ್ಯಾಂಡಮ್ ಆಗಿ ತಪಾಸಣೆಗೆ ಇಳಿದಿದೆ. ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು, ಪೊಲೀಸರು, ಸೋಂಕಿತರು ಪತ್ತೆಯಾದ ಪ್ರದೇಶದ ಸುತ್ತಲಿನ ಜನರು, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ಬರುವ ಲಕ್ಷಣ ಇರುವ ಜನರು, ಕೂಲಿ ಕಾರ್ಮಿಕರು, ಕೆಎಸ್‌ಆರ್‌ಟಿ ಸಿಬ್ಬಂದಿ, ಉಸಿರಾಟ ತೊಂದರೆ ಹಾಗೂ ಕೆಮ್ಮು-ನೆಗಡಿ-ಜ್ವರ ಕಂಡು ಬಂದ ವ್ಯಕ್ತಿಗಳ ತಪಾಸಣೆ ಮಾಡಲಾಗುತ್ತಿದೆ.
Related Articles
Advertisement
54 ಜನ ಕೋವಿಡ್‌ಗೆ ಬಲಿ :ಕೋವಿಡ್ ಗೆ ಈ ವರೆಗೆ 54 ಜನರು ಬಲಿಯಾಗಿದ್ದಾರೆ. ಅದರಲ್ಲಿ ಓರ್ವ ಸರ್ಕಾರಿ ವೈದ್ಯಾಧಿಕಾರಿ, ಓರ್ವ ಖಾಸಗಿ ವೈದ್ಯರನ್ನೂ ಕೋವಿಡ್ ಬಲಿ ಪಡೆದಿದೆ. 51 ಜನರು ಬಾಗಲಕೋಟೆ ಜಿಲ್ಲೆಯಲ್ಲಿ ಮೃತಪಟ್ಟರೆ, ಮೂವರು ಬೇರೆ ಬೇರೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದಾರೆ.