ಬಾಗಲಕೋಟೆ: ಸೈನಿಕರು, ಮಾಜಿ ಸೈನಿಕರು ಹಾಗೂ ಪೊಲೀಸರಿಗಾಗಿ ಇಲಾಖೆಯಿಂದ ನಡೆಸುತ್ತಿರುವ ಕ್ಯಾಂಟಿನ್ ಮಾದರಿಯಲ್ಲೇ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದ “ಸಾಯಿ ಇಂಟರ್ ನ್ಯಾಶನಲ್’ ಖಾಸಗಿ ಸಂಸ್ಥೆಯೊಂದು ನಗರದಲ್ಲಿ ಕ್ಯಾಂಟಿನ್ ತೆರೆಯುತ್ತಿದೆ.
Advertisement
ಸರ್ಕಾರಿ ನೌಕರರಿಗಾಗಿಯೇ ಕ್ಯಾಂಟಿನ್ ಆರಂಭಿಸಬೇಕೆಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಆದರೆ, ಅದರ ನಿರ್ವಹಣೆ ಸಹಿತ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಆದರೀಗ ಮತ್ತೆ ಈ ಕ್ಯಾಂಟಿನ್ ಆರಂಭಗೊಳ್ಳಲಿದೆ.
Related Articles
Advertisement
ಸದಸ್ಯತ್ವ ಇದ್ದವರಿಗೆ ಮಾತ್ರ: ಇಲ್ಲಿ ಸದಸ್ಯತ್ವ ಪಡೆಯಲು ಇಲಾಖೆಯ ಗುರುತಿನ ಚೀಟಿ, ಆಧಾರ್ ಕಾರ್ಡ್, 2 ಪಾಸ್‌ಪೋರ್ಟ್ ಸೈಜ್ ಫೋಟೋ, ಪ್ರಸ್ತುತ ವೇತನ ಪತ್ರ ನೀಡುವುದು ಕಡ್ಡಾಯವಾಗಿದೆ. ಈ ದಾಖಲೆ ನೀಡಿ ಕ್ಯಾಂಟಿನ್‌ನಲ್ಲಿ ಸದಸ್ಯತ್ವ ಪಡೆಯಬೇಕು. ಅದಕ್ಕೆ ಕ್ಯಾಂಟಿನ್‌ನಿಂದ್ ಗುರುತಿನ ಚೀಟಿ ನೀಡಲಿದ್ದು, ಆ ಗುರುತಿನ ಚೀಟಿ ತೋರಿಸಿ ಪ್ರತಿ ತಿಂಗಳು ಗೃಹ ಬಳಕೆ ಹಾಗೂ ದಿನಸಿ ವಸ್ತುಗಳನ್ನು ಖರೀದಿಸಬಹುದು. ಪೊಲೀಸ್ ಕ್ಯಾಂಟಿನ್ ಹಾಗೂ ಸೈನಿಕರ ಕ್ಯಾಂಟಿನ್‌ನಲ್ಲಿ ಆಯಾ ಇಲಾಖೆ ನೌಕರರಿಗೆ ಸೀಮಿತಗೊಳಿಸಿದಂತೆ ಇಲ್ಲೂ ಸರ್ಕಾರಿ ನೌಕರ-ಸಿಬ್ಬಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಕ್ಯಾಂಟಿನ್‌ನಲ್ಲಿ ಏನು ದೊರೆಯಲಿವೆ: ದೆಹಲಿ ಮೂಲದ ಸಾಯಿ ಇಂಟರ್‌ನ್ಯಾಶನಲ್‌ನಿಂದ ಸರ್ಕಾರಿ ನೌಕರರ ಕ್ಯಾಂಟಿನ್ ಆರಂಭಗೊಳ್ಳಲಿದ್ದು, ಈ ಕ್ಯಾಂಟಿನ್ ಜತೆಗೆ ಸ್ಯಾಮಸಂಗ್, ಎಲ್‌ಜಿ, ಐಎಫ್‌ಬಿ, ಬೋಸ್ಕ್, ವಿವೋ, ಐಟಿಸಿ, ಎಸ್ ಸುಜಕಿ ಹೀಗೆ ಹಲವು ಬ್ರಾಂಡ್ ಗಳ ಮೊಬೈಲ್, ಟಿವಿ, ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ವಾಟರ್ ಪ್ಯುರಿಪೈಯರ್, ದಿನ ಬಳಕೆ ವಸ್ತುಗಳು, ಎಫ್.ಎಂ.ಸಿ.ಜಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಜತೆಗೆ ಹಣಕಾಸು ತೊಂದರೆ ನೀಗಿಸಿಕೊಳ್ಳಲು ಕಂತುಗಳ ವ್ಯವಸ್ಥೆ ಕೂಡ ಮಾಡಲಾಗಿದೆ.
24 ಸಾವಿರ ನೌಕರರಿಗೆ ಅನುಕೂಲ: ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ, ಬಿಸಿಎಂ ಸೇರಿದಂತೆ ಜಿಪಂ ವ್ಯಾಪ್ತಿಯ 27 ಹಾಗೂ ಕಂದಾಯ ಇಲಾಖೆಯ7 ಸೇರಿದಂತೆ ರಾಜ್ಯ ಸರ್ಕಾರದ ಅಧೀನದಲ್ಲಿ ಒಟ್ಟು ಸುಮಾರು 63 ಇಲಾಖೆಗಳಿವೆ. ಈ ಎಲ್ಲ ಇಲಾಖೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು “ಡಿ’ ದರ್ಜೆಯ ನೌಕರರವರೆಗೆ ಒಟ್ಟು 24 ಸಾವಿರ ಸರ್ಕಾರಿ ನೌಕರರಿದ್ದಾರೆ. ಈ ಎಲ್ಲ ನೌಕರರೂ ಇಲ್ಲಿ ಸದಸ್ಯತ್ವ ಪಡೆಯಲು ಅವಕಾಶವಿದೆ. ಬಾಗಲಕೋಟೆ ನಗರವೊಂದರಲ್ಲೇ ಸುಮಾರು 4 ಸಾವಿರ ಜನ ಸರ್ಕಾರಿ ನೌಕರರಿದ್ದು, ಅವರೆಲ್ಲರ ಸದಸ್ಯತ್ವ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಕ್ಯಾಂಟಿನ್‌ನ ವ್ಯವಸ್ಥಾಪಕ ಪರಶುರಾಮ ಪಿ. “ಉದಯವಾಣಿ’ಗೆ ತಿಳಿಸಿದರು. ಕ್ಯಾಂಟೀನ್‌ನಲ್ಲಿ ಏನು ದೊರೆಯಲಿವೆ?
ದೆಹಲಿ ಮೂಲದ ಸಾಯಿ ಇಂಟರ್‌ನ್ಯಾಶನಲ್‌ನಿಂದ ಸರ್ಕಾರಿ ನೌಕರರ ಕ್ಯಾಂಟಿನ್ ಆರಂಭಗೊಳ್ಳಲಿದ್ದು, ಈ ಕ್ಯಾಂಟಿನ್ ಜತೆಗೆ ಸ್ಯಾಮಸಂಗ್, ಎಲ್‌ಜಿ, ಐಎಫ್‌ಬಿ, ಬೋಸ್ಕ್, ವಿವೋ, ಐಟಿಸಿ, ಎಸ್ ಸುಜಕಿ ಹೀಗೆ ಹಲವು ಬ್ರಾಂಡ್‌ಗಳ ಮೊಬೈಲ್, ಟಿವಿ, ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ವಾಟರ್ ಪ್ಯುರಿಪೈಯರ್, ದಿನ ಬಳಕೆ ವಸ್ತುಗಳು, ಎಫ್.ಎಂ.ಸಿ.ಜಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಜತೆಗೆ ಹಣಕಾಸು ತೊಂದರೆ ನೀಗಿಸಿಕೊಳ್ಳಲು ಕಂತುಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಸರ್ಕಾರಿ ನೌಕರರಿಗಾಗಿ ಖಾಸಗಿಯಾಗಿ ಪ್ರತ್ಯೇಕ ಕ್ಯಾಂಟಿನ್ ಆರಂಭಗೊಳ್ಳುತ್ತಿದೆ. ಗೃಹ ಬಳಕೆ ಹಾಗೂ ದಿನಸಿ ಸಾಮಗ್ರಿ ದೊರೆಯಲಿವೆ. ನೌಕರರ ವೇತನ ಪಟ್ಟಿ ಪರಿಗಣಿಸಿ, ವೇತನಕ್ಕೆ ಅನುಗುಣವಾಗಿ ಸಾಲದ ರೂಪದಲ್ಲಿ (ಉದ್ರಿ) ಸಾಮಗ್ರಿ ನೀಡಲಾಗುತ್ತದೆ. 3 ಸಾವಿರ ಮೇಲ್ಪಟ್ಟು ದಿನಸಿ ಖರೀದಿಸಿದರೆ 5 ಕಿ.ಮೀ ವ್ಯಾಪ್ತಿಯ ಒಳಗಿದ್ದರೆ ಉಚಿತ ಸಾಗಾಣಿಕೆ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಪರಶುರಾಮ ಪಿ, ವ್ಯವಸ್ಥಾಪಕ, ಸರ್ಕಾರಿ ನೌಕರರ ಕ್ಯಾಂಟಿನ್