ಮಹಿಳೆಯರು, ಡೊಳ್ಳು ಕುಣಿತ, ಹಲವು ವಾದ್ಯಗಳ ಸಂಗೀತ ಗಮನ ಸೆಳೆಯಿತು. ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಈ ಬಾರಿಯ ಅದ್ಧೂರಿ ಚಾಲನೆ ದೊರೆತಿದೆ. ಬೆಳಿಗ್ಗೆ ಕಿಲ್ಲೆಯ ಶ್ರೀ ದ್ಯಾಮವ್ವ -ದುರ್ಗವ್ವ ದೇವಿ ದೇವಸ್ಥಾನದಿಂದ ಗ್ರಾಮ ದೇವಿಯರ ಭವ್ಯ ಪೂರ್ಣಕುಂಭದ ಮೆರವಣಿಗೆಗೆ ಶಾಸಕ ಡಾ| ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಬಸವಪ್ರಭು ಸರನಾಡಗೌಡ ಮತ್ತಿತರರು ಚಾಲನೆ ನೀಡುತ್ತಿದ್ದಂತೆ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು. ಹೂವಿನಿಂದ
ಅಲಂಕೃತಗೊಂಡ ಟ್ರಾಕ್ಟರ್‌ನಲ್ಲಿ ದೇವಿಯು ವಿರಾಜಮಾನಗಳಾಗಿ ಕಂಗೊಳಿಸಿದಳು. ನಾಲ್ಕು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.
Advertisement
ಸಾಂಪ್ರದಾಯಿಕ ಇಳಕಲ್ಲ ಸೀರೆ ತೊಟ್ಟಿದ್ದ ಸುಮಂಗಲಿಯರು ಕುಂಭ ಹೊತ್ತು ಶ್ರೀ ಗ್ರಾಮದೇವಿಯರ ಭವ್ಯ ಮೆರವಣಿಗೆ ಸಾಗಿದಾಗ ಜೈ ಕಾರಗಳು ಮೊಳಗಿದವು. ಮೆರವಣಿಗೆಯುದ್ದಕ್ಕೂ ಆಂಜನೇಯ, ಶ್ರೀರಾಮ, ಸೀತಾಮಾತೆ ವೇಷಧಾರಿಗಳ ಗೊಂಬೆ ಕಲಾವಿದರು ಹೆಜ್ಜೆ ಹಾಕಿದರು. ಮಹಿಳಾ ಕಲಾವಿದರ ಡೊಳ್ಳು ಕುಣಿತ, ಜಾಂಜ್ ಪಾತಾಕ, ಕರಡಿ ಮಜಲು, ವೀರಗಾಸೆ,ಬ್ಯಾಂಡ್ ನಾದ ಜಾತ್ರಾ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಿತು. ಮೆರವಣಿಗೆಯು ನಗರದ ಪಂಕಾ ಮಸೀದಿ, ಹಳಪೇಟ, ಶಾರದಾ ಪ್ರಿಟಿಂಗ್ ಪ್ರಸ್, ಟೆಂಗಿನಮಠ, ಬಿವಿವಿ ಸಂಘದ ಮುಖ್ಯದ್ವಾರ, ಕಾಲೇಜು ರಸ್ತೆ ಮೂಲಕದ ಬಸವೇಶ್ವರ ವೃತ್ತ ತಲುಪುತ್ತಿದ್ದಂತೆ ಜಯ-ಘೋಷಣೆಗಳು ಮುಗಿಲು ಮುಟ್ಟಿದವು.