ಇತ್ತೀಚೆಗಷ್ಟೇ “ಅನಂತು ವರ್ಸಸ್ ನುಸ್ರತ್’ ಎನ್ನುವ ಹೆಸರಿನ ಚಿತ್ರವೊಂದು ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಈಗ ಅಂಥದ್ದೇ ಟೈಟಲ್‌ನ ಮತ್ತೂಂದು ಚಿತ್ರ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಆ ಚಿತ್ರದ ಹೆಸರು “ಬದ್ರಿ ವರ್ಸಸ್ ಮಧುಮತಿ’. ಅಂದಹಾಗೆ, “ಅನಂತು ವರ್ಸಸ್ ನುಸ್ರತ್’ ಚಿತ್ರಕ್ಕೂ “ಬದ್ರಿ ವರ್ಸಸ್ ಮಧುಮತಿ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಟೈಟಲ್‌ನಲ್ಲಿ “ವರ್ಸಸ್’ ಎಂಬುದಿದೆ ಎನ್ನುವುದನ್ನು ಬಿಟ್ಟರೆ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಚಿತ್ರತಂಡದ ಮಾತು. ಇತ್ತೀಚೆಗೆ “ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಹೊರತಂದಿದೆ.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್ “ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಬದ್ರಿ ವರ್ಸಸ್ ಮಧುಮತಿ’ ಚಿತ್ರದಲ್ಲಿ ನವನಟ ಪ್ರತಾಪವನ್ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಆಕಾಂಕ್ಷಾ ಗಾಂಧಿ ನಟಿಸುತ್ತಿದ್ದಾರೆ. ಆಂಧ್ರಪ್ರದೇಶ ಮೂಲದ ಶಂಕರ ನಾರಾಯಣ ರೆಡ್ಡಿ ಈ ಚಿತ್ರವನ್ನು ನಿರ್ದೇಶನ ಮಾಡಿ¨ªಾರೆ.
ಇದೇ ವೇಳೆ ಮಾತನಾಡಿದ ನಾಯಕ ನಟ ಪ್ರತಾಪವನ್, “ಒಳ್ಳೆಯ ಚಿತ್ರ ಮಾಡಬೇಕು. ಚಿತ್ರರಂಗದಲ್ಲಿ ನಾಯಕ ನಟನಾಗಬೇಕು ಎಂಬ ಬಹು ವರ್ಷಗಳ ಕನಸು ಈ ಚಿತ್ರದ ಮೂಲಕ ನನಸಾಗುತ್ತಿದೆ. ಇದು ಸಂಪೂರ್ಣ ಆ್ಯಕ್ಷನ್ ಕಂ ಲವ್ ಪ್ರಧಾನ ಚಿತ್ರವಾಗಿದೆ. ಇದರಲ್ಲಿ ನಾನು ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ಎಲ್ಲೂ ರಾಜಿಯಾಗದಂತೆ ಬರೋಬರಿ ನಾಲ್ಕು ವರ್ಷಗಳ ಸಮಯ ತೆಗೆದುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದೇವೆ. ಕುಟುಂಬ ಸಮೇತ ಥಿಯೇಟರ್‌ಗೆ ಬಂದು ನೋಡುವಂಥ ಚಿತ್ರವನ್ನು ಮಾಡಿದ್ದೇವೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶಂಕರ ನಾರಾಯಣ ರೆಡ್ಡಿ, “ಚಿತ್ರದಲ್ಲಿ ನಾಯಕ ಆರ್ಮಿ ಆಫೀಸರ್ ಆಗಿದ್ದು ಒಂದು ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ ಆ ಹುಡುಗಿಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗುತ್ತದೆ. ತನ್ನ ಕುಟುಂಬ ಹಾಗೂ ಆ ಹುಡುಗಿ ಎರಡನ್ನೂ ಅತಿಯಾಗಿ ಪ್ರೀತಿಸುವ ನಾಯಕ ಎರಡನ್ನೂ ಯಾವ ರೀತಿಯಲ್ಲಿ ನಿಭಾಯಿಸುತ್ತಾನೆ ಎಂಬುದು ಚಿತ್ರದ ಕಥಾಹಂದರ. ಅಂತಿಮವಾಗಿ ತಾನು ಪ್ರೀತಿಸಿದ ಹುಡುಗಿಯನ್ನು ಪಡೆಯುತ್ತಾನೋ, ಇಲ್ಲವೋ? ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್. ಮನರಂಜನೆಗೆ ಏನೂ ಕೊರತೆಯಿಲ್ಲದಂತೆ ಚಿತ್ರವನ್ನು ತೆರೆಮೇಲೆ ತರುತ್ತಿದ್ದೇವೆ’ ಎಂದರು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದು ಚಿತ್ರದ ವಿಶೇಷತೆಗಳ ಬಗ್ಗೆ, ತಮ್ಮ ಅನಿಸಿಕೆ-ಅನುಭವಗಳನ್ನು ಹಂಚಿಕೊಂಡರು.
“ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಹಾಡುಗಳಿಗೆ ಎಲ್ವಿನ್ ಜೋಶ್ವಾ ಸಂಗೀತ ಸಂಯೋಜನೆಯಿದ್ದು, ಜಯಂತ ಕಾಯ್ಕಿಣಿ ಸಾಹಿತ್ಯ ಒದಗಿಸಿದ್ದಾರೆ. ಚಿತ್ರದ ದೃಶ್ಯಗಳಿಗೆ ಶಂಕರ್ ಛಾಯಾಗ್ರಹಣವಿದ್ದು, ಕೆ.ಎಂ ಪ್ರಕಾಶ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈಗಾಗಲೇ ಚಿತ್ರದ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಅಂತಿಮ ಕೆಲಸದಲ್ಲಿರುವ ಚಿತ್ರತಂಡ, ಫೆಬ್ರವರಿ ಅಂತ್ಯಕ್ಕೆ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಯೋಜನೆಯಿದೆ ಎಂದಿದೆ.