ವೆಲ್ವಾ (ಸ್ಪೇನ್): ಪ್ರತಿಷ್ಠಿತ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ರವಿವಾರದಿಂದ ಇಲ್ಲಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಪಿ.ವಿ. ಸಿಂಧು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದೇ ಎಂಬುದೊಂದು ಕುತೂಹಲ.
ಎರಡು ವರ್ಷಗಳ ಹಿಂದೆ ಬಾಸೆಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಮೊದಲ ಸಲ ಪ್ರಶಸ್ತಿಯನ್ನೆತ್ತಿದ್ದರು. ಅನಂತರ ಸಾಕಷ್ಟು ಏರಿಳಿತ ಕಾಣುತ್ತ ಬಂದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ, ವರ್ಷಾಂತ್ಯದ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಇವರದಾಗಿದೆ.
ಇದನ್ನೂ ಓದಿ:ದುಬೈನಲ್ಲಿ ಕಳುವಾಗಿದ್ದ ಮರಡೋನ ಅವರ 20 ಲಕ್ಷದ ವಾಚ್ ಅಸ್ಸಾಮ್‌ನಲ್ಲಿ ಪತ್ತೆ!
ಆದರೆ ಇತ್ತೀಚಿನ ಸತತ 3 ಕೂಟಗಳ ಸೆಮಿಫೈನಲ್‌ಗಳಲ್ಲಿ ಎಡವಿದ್ದಾರೆ (ಫ್ರೆಂಚ್ ಓಪನ್, ಇಂಡೋನೇಶ್ಯ ಮಾಸ್ಟರ್ ಮತ್ತು ಇಂಡೋನೇಶ್ಯ ಓಪನ್).
ಆದರೆ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಿಂದ ಇಂಡೋನೇಶ್ಯ ಹಿಂದೆ ಸರಿದಿದೆ.