ಪುಣೆ: ಪುಣೆ ತುಳುಕೂಟದ ಯುವ ವಿಭಾಗ ಆಯೋಜಿಸಿದ ಬ್ಯಾಡ್ಮಿಂಟನ್ ಪಂದ್ಯಾಟ ನ. 4ರಂದು ನಗರದ ಕಟಾರಿಯಾ ಹೈಸ್ಕೂಲ್ ಕ್ಯಾಂಪಸ್ ಬ್ಯಾಡ್ಮಿಂಟನ್ ಕೋರ್ಟ್, ಮುಕುಂದ್ ನಗರ ಇಲ್ಲಿ ನಡೆಯಿತು.
ಪಿಂಪ್ರಿ- ಚಿಂಚಾÌಡ್ ಯೂತ್ ಬಂಟ್ಸ್ ತಂಡವು ವಿಜೇತ ತಂಡವಾಗಿದ್ದು ವಿನ್ನರ್ ಟ್ರೋಫಿಯನ್ನು ಪಡೆದರೆ ಯುನಿಟಿ ಪಿಂಪ್ರಿ ತಂಡವು ರನ್ನರ್‌ಅಪ್ ಪ್ರಶಸ್ತಿಯನ್ನು ಜಯಿಸಿತು. ಮೆರೀಡ್ ಕಪಲ್ಸ… ಡಬಲ್ಸ… ಪ್ರಶಸ್ತಿಯನ್ನು ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಗಣೇಶ್ ಪೂಂಜಾ ಹಾಗೂ ನಿಶ್ಮಿತಾ ಜಿ. ಪೂಂಜಾ ದಂಪತಿ ಪಡೆದರು. ರನ್ನರ್‌ಅಪ್ ಪ್ರಶಸ್ತಿಯನ್ನು ಪುಣೆ ತುಳುಕೂಟದ ಯುವ ವಿಭಾಗದ ಸದಸ್ಯ ಪ್ರವೀಣ್ ಪೂಜಾರಿ ಹಾಗೂ ರೇಣುಕಾ ಪಿ. ಪೂಜಾರಿ ದಂಪತಿ ಪಡೆದುಕೊಂಡರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅವರು ಈ ಸಂದರ್ಭ ಪುಣೆ ತುಳುಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್ ಪಿ. ಶೆಟ್ಟಿ ಮತ್ತು ಯುವ ವಿಭಾಗದ ಸದಸ್ಯರನ್ನು ಅಭಿನಂದಿ ಸುತ್ತಾ ಯುವ ಸಮೂಹವನ್ನು ಒಗ್ಗೂYಡಿಸುವಲ್ಲಿ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳು ಪೂರಕವಾಗಿ ನೆರ ವಾಗುತ್ತದೆ. ಮುಖ್ಯವಾಗಿ ಯುವ ಸಮುದಾಯದ ಆಸಕ್ತ ವಿಷಯಗಳಿಗೆ ಆದ್ಯತೆ ನೀಡಿ ಇಂತಹ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಉತ್ತಮ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಸಂಘ ಸಂಸ್ಥೆಗಳು ಯುವ ವಿಭಾಗಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದರು.
ಈ ಸಂದರ್ಭ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಶೆಟ್ಟಿ ಬಜಗೋಳಿ, ಪುರುಷೋತ್ತಮ ಶೆಟ್ಟಿ, ಸಮಾಜ ಸೇವಕಿ ಪ್ರೇಮಾ ಪಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್ ಪಿ. ಶೆಟ್ಟಿ, ಬಂಟ್ಸ್ ಅಸೋಸಿಯೇಶನ್ ಪುಣೆಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಎರವಾಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಯುವ ವಿಭಾಗದ ಸದಸ್ಯರು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು.
ಚಿತ್ರ- ವರದಿ: ಕಿರಣ್ ಬಿ. ರೈ ಕರ್ನೂರು