Advertisement

ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸ್ಪರ್ಧೆ: ಕ್ವಾರ್ಟರ್‌ ಫೈನಲ್‌ಗೆ ಪಿ.ವಿ.ಸಿಂಧು, ಶ್ರೀಕಾಂತ್‌

09:14 PM Aug 05, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

Advertisement

ಕಳೆದ ಸಲ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಉಗಾಂಡದ ಹುಸಿನಾ ಕೊಬುಗಬೆ ಅವರನ್ನು 21-10, 21-9 ಅಂತರದಿಂದ ಪರಾಭವಗೊಳಿಸಿದರು. ಇವರ ಮುಂದಿನ ಎದುರಾಳಿ ಮಲೇಷ್ಯಾದ ಗೋಹ್‌ ಜಿನ್‌ ವೀ.

ಕೆ.ಶ್ರೀಕಾಂತ್‌ ಶ್ರೀಲಂಕಾದ ದುಮಿಂದು ಅಭಯವಿಕ್ರಮ ಅವರಿಗೆ 21-9, 21-12 ಅಂತರದ ಸೋಲುಣಿಸಿದರು. ಶ್ರೀಕಾಂತ್‌ ಕೂಡ ಗೋಲ್ಸ್‌ಕೋಸ್ಟ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಶ್ರೀಕಾಂತ್‌ ಅವರಿನ್ನು 54ನೇ ರ್‍ಯಾಂಕಿಂಗ್‌ನ ಇಂಗ್ಲೆಂಡ್‌ ಆಟಗಾರ ಟಾಬಿ ಪೆಂಟಿ ಅವರೆದುರು ಆಡಲಿದ್ದಾರೆ.

ಇದಕ್ಕೂ ಮೊದಲು ವನಿತಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌-ತ್ರಿಶಾ ಜಾಲಿ ಕೂಡ ಗೆಲುವಿನ ಓಟ ಮುಂದುವರಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದರು. ಇವರು ಮಾರಿಶಿಯಸ್‌ನ ಜೆಮಿಮಾ ಲೆಯುಂಗ್‌ ಫಾರ್‌ ಸಾಂಗ್‌-ಗಣೇಶ ಮುಂಗ್ರಾಹ್‌ ವಿರುದ್ಧ 21-2, 21-4 ಅಂತರದ ಸುಲಭ ಜಯ ಸಾಧಿಸಿದ್ದರು. ಇವರ ಎದುರಾಳಿಯಾಗಿರುವವರು ಜಮೈಕಾದ ಟಹ್ಲಿಯಾ ರಿಚರ್ಡ್‌ಸನ್‌-ಕ್ಯಾಥರಿನ್‌ ವಿಂಟರ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next