Advertisement

Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್

11:16 AM Jul 06, 2024 | Team Udayavani |

ಕ್ಯಾಲ್ಗರಿ (ಕೆನಡಾ): ತಮ್ಮ ಕನಸಿನ ಓಟವನ್ನು ಮುಂದುವರಿಸಿರುವ ಭಾರತದ ಉದಯೋನ್ಮುಖ ಶಟ್ಲರ್ ಪ್ರಿಯಾಂಶು ರಾಜಾವತ್ ಕೆನಡಾ ಓಪನ್‌ನಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕದ ಡೆನ್ಮಾರ್ಕ್‌ನ ಆಂಡರ್ಸ್ ಆ್ಯಂಟನ್‌ಸೆನ್ ಅವರನ್ನು ದಂಗುಬಡಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Advertisement

ಶುಕ್ರವಾರ ರಾತ್ರಿ ನಡೆದ ಕಠಿನ ಒಂದು ಗಂಟೆ 19 ನಿಮಿಷಗಳ ಕ್ವಾರ್ಟರ್‌ಫೈನಲ್‌ ಜಿದ್ದಿನ ಕಾಳಗದಲ್ಲಿ ವಿಶ್ವದ 39 ನೇ ಶ್ರೇಯಾಂಕಿತ ರಾಜಾವತ್ 21-11, 17-21, 21-19 ರಿಂದ ಆ್ಯಂಟನ್‌ಸೆನ್‌ರನ್ನು ಸೋಲಿಸಿದರು.

22 ವರ್ಷದ ರಾಜಾವತ್‌ ಅವರ ಆಂಟನ್‌ಸೆನ್ ವಿರುದ್ಧದ ಗೆಲುವು ಅಗ್ರ-10 ಆಟಗಾನೊಬ್ಬನ ವಿರುದ್ಧದ ಮೊದಲ ಜಯವಾಗಿದೆ. ವರ್ಲ್ಡ್ ಟೂರ್ ಸೂಪರ್ 500 ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಅಲೆಕ್ಸ್ ಲೇನಿಯರ್ ಅವರನ್ನು ಎದುರಿಸಲಿದ್ದಾರೆ.ಆಂಟನ್‌ಸೆನ್‌ 9-9ರಲ್ಲಿ ಸಮಬಲ ಸಾಧಿಸುವ ಮುನ್ನ ರಾಜಾವತ್‌ ಆರಂಭಿಕ ಗೇಮ್‌ನಲ್ಲಿ 7-4 ಮುನ್ನಡೆ ಸಾಧಿಸಿದರು.

ಆದಾಗ್ಯೂ, ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿದರು.ಮೂರನೇ ಶ್ರೇಯಾಂಕದ ಭಾರತೀಯರು 18-21 21-19 16-21 ರಿಂದ ಚೈನೀಸ್ ತೈಪೆಯ ಪೀ ಶಾನ್ ಹ್ಸಿಹ್ ಮತ್ತು ಎನ್-ತ್ಸು ಹಂಗ್ ವಿರುದ್ಧ ಸೋಲು ಕಂಡರು.

Advertisement

Udayavani is now on Telegram. Click here to join our channel and stay updated with the latest news.

Next