Advertisement
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಚೈನೀಸ್ ತೈಪೆಯ ಪೈ ಯು ಪೊ ಅವರನ್ನು 18-21, 27-25, 21-9 ಗೇಮ್‌ಗಳಿಂದ ಉರುಳಿಸುವಲ್ಲಿ ಯಶಸ್ವಿಯಾದರು. ಸುದೀರ್ಘ ಅವಧಿಯವರೆಗೆ ಸಾಗಿದ ಈ ಪಂದ್ಯದ ದ್ವಿತೀಯ ಗೇಮ್‌ನಲ್ಲಿ ಸಿಂಧು ಗೆಲ್ಲಲು ತೀವ್ರ ಹೋರಾಟ ನಡೆಸಿದರು. ಈ ಹೋರಾಟ ಒಂದು ಗಂಟೆ, 17 ನಿಮಿಷಗಳವರೆಗೆ ಸಾಗಿತ್ತು. ಸಿಂಧು ಮುಂದಿನ ಪಂದ್ಯದಲ್ಲಿ ಸಿಂಗಾಪುರದ ಯೂಯಿ ಯಾನ್ ಜಾಸ್ಲಿನ್ ಹೂಯಿ ಅವರನ್ನು ಎದುರಿಸಲಿದ್ದಾರೆ.
ಗಾಯದ ಸಮಸ್ಯೆಯಿಂದ ಚೇತರಿಸಿ ಸ್ಪರ್ಧೆಗೆ ಮರಳಿರುವ ಸೈನಾ ಅವರು ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯದ ಸಿಮ್ ಯೂಜಿನ್ ಅವರನ್ನು 21-15, 17-21, 21-13 ಗೇಮ್‌ಗಳಿಂದ ಮಣಿಸಿದರು. ಅವರು ಮುಂದಿನ ಪಂದ್ಯದಲ್ಲಿ ಚೀನದ ಝೀ ಯಿ ವಾಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ. ಸೇನ್‌ಗೆ ಸೋಲು
ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತ ಲಕ್ಷ್ಯ ಸೇನ್ ಅವರು ಚೀನದ ಶ್ರೇಯಾಂಕರಹಿತ ಆಟಗಾರ ಲಿ ಶಿ ಫೆಂಗ್ ಅವರೆದುರು ಸೋತು ಆಘಾತಕ್ಕೆ ಒಳಗಾದರು. 5ನೇ ಶ್ರೇಯಾಂಕದ ಸೇನ್ 21-12, 10-21, 19-21 ಗೇಮ್‌ಗಳಿಂದ ಶರಣಾದರು. ಈ ಹೋರಾಟ 56 ನಿಮಿಷಗಳವರೆಗೆ ಸಾಗಿತ್ತು. ವಿಶ್ವದ 19ನೇ ರ್‍ಯಾಂಕಿನ ಪ್ರಣೀತ್ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟಿ ಕೈಯಲ್ಲಿ 17-21, 13-21 ಗೇಮ್‌ಗಳಿಂದ ಸೋತು ಹೊರಬಿದ್ದರು.
Related Articles
Advertisement
ಶ್ರೀಕಾಂತ್‌ಗೆ ಗೆಲುವುಕೆ. ಶ್ರೀಕಾಂತ್ ಕಠಿನ ಹೋರಾಟದಲ್ಲಿ ಮಲೇಶ್ಯದ ಟಿಝಿ ಯಾಂಗ್ ಎನ್‌ಜಿ ಅವರನ್ನು 22-20, 21-15 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಮುಂದಿನ ಹೋರಾಟದಲ್ಲಿ ಅವರು ಚೀನದ ಅರ್ಹತಾ ಆಟಗಾರ ವೆಂಗ್ ಹಾಂಗ್ ಯಾಂಗ್ ಅವರನ್ನು ಎದುರಿಸಲಿದ್ದಾರೆ.