Advertisement

Badlapur Encounter: ಆರೋಪ-ಪ್ರತ್ಯಾರೋಪ; ಕೈಕೋಳ ಇದ್ದಾಗ ದಾಳಿ ಹೇಗೆ ಸಾಧ್ಯ?: ವಿಪಕ್ಷಗಳು

10:19 PM Sep 24, 2024 | Team Udayavani |

ಮುಂಬೈ: ಪೊಲೀಸರ ವಶದಲ್ಲಿದ್ದ ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್‌ ಶಿಂಧೆಯ ಸಾವು ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

Advertisement

ವಿವಾದಿತ ಶಾಲೆಯು ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದರಿಂದ ಸಾಕ್ಷ್ಯ ನಾಶಗೊಳಿಸಲು ಅಕ್ಷಯ್‌ ಹತ್ಯೆ ನಡೆಸಲಾಗಿದೆ ಎಂದು ಪ್ರತಿಪಕ್ಷಗಳು ದೂರಿವೆ. ಇದೇ ವೇಳೆ, ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಒಂದೆಡೆ “ನನ್ನ ಮಗ ಪಟಾಕಿ ಸಿಡಿಸಲು, ರಸ್ತೆ ದಾಟಲೂ ಭಯ ಪಡುವವನು. ಅಂಥವನು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಎನ್ನುವುದು ನಂಬಲರ್ಹವಲ್ಲ. ಅವನನ್ನು ಪಿತೂರಿ ನಡೆಸಿ ಕೊಲ್ಲಲಾಗಿದೆ’ ಎಂದು ಆರೋಪಿಯ ತಾಯಿ ಹೇಳಿದ್ದಾರೆ. ಇನ್ನೊಂದೆಡೆ, ಮಹಾರಾಷ್ಟ್ರ ಮಾಜಿ ಗೃಹ ಮಂತ್ರಿ ಅನಿಲ್‌ ದೇಶ್‌ಮುಖ್‌, “ಕೈಕೋಳ ತೊಡಿಸಿದ್ದ ಆರೋಪಿ ಪೊಲೀಸರ ಮೇಲೆ ದಾಳಿ ಮಾಡಲು ಹೇಗೆ ಸಾಧ್ಯ? ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು ಈ ಎನ್‌ಕೌಂಟರ್‌ ನಡೆಸಲಾಗಿದೆ’ ಎಂದು ಆರೋಪಿಸಿದ್ದಾರೆ.

ಸೋಮವಾರ ಪೊಲೀಸ್‌ ವಾಹನದಲ್ಲೇ ಪೊಲೀಸರ ಬಂದೂಕು ಕಸಿದು ಗುಂಡು ಹಾರಿಸಿದ್ದ ಅಕ್ಷಯ್‌ನನ್ನು ಎನ್‌ಕೌಂಟರ್‌ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next