Advertisement

ಬದಿಯಡ್ಕ: ವಿಕಲಚೇತನರಿಗಾಗಿ ವೈದ್ಯಕೀಯ ಶಿಬಿರ

08:38 PM Jun 28, 2019 | Sriram |

ಬದಿಯಡ್ಕ: ವಿಕಲ ಚೇತನರು ಎಲ್ಲರಂತೆ ಜೀವಿಸಲು ಅವರಿಗೆ ಅಗತ್ಯವುಳ್ಳ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿದೆ. ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಎಂತಹ ಕಷ್ಟವನ್ನೂ ಮೆಟ್ಟಿನಿಲ್ಲಬಹುದು ಎಂದು ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಹೇಳಿದರು.

Advertisement

ಬದಿಯಡ್ಕದಲ್ಲಿರುವ ಬಿಆರ್‌ಸಿ ಕುಂಬಳೆಯಲ್ಲಿ ನಡೆದ ವಿಕಲಚೇತನ ರಿಗಿರುವ ಉಪಕರಣಗಳ ಆಯ್ಕೆಗಾಗಿ ನಡೆದ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದಿಯಡ್ಕ ಗ್ರಾಮ ಪಂಚಾಯತ್‌ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮಾನಸಿಕ ತಜ್ಞ ವೈದ್ಯರುಗಳಾದ ಡಾ| ಬಾಲಸುಬ್ರಹ್ಮಣ್ಯ ಹಾಗೂ ಡಾ| ರೀತಿ ಶುಭಾಶಂಸನೆಗೆ„ದು ವೈದ್ಯಕೀಯ ಸಲಹೆಗಳನ್ನು ನೀಡಿ ಫಲಾನುಭವಿಗಳನ್ನು ತಪಾಸಣೆಗೆ„ದರು. ಗಿರೀಶ್‌ ಸ್ವಾಗತಿಸಿ, ಖದೀಜತ್‌ ಸೆರೀನಾ ಧನ್ಯವಾದವನ್ನಿತ್ತರು. 62 ಮಂದಿ ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next