Advertisement

ಬ್ಯಾಡಗಿ: ವೈದ್ಯರದ್ದು ಜೀವ ಉಳಿಸುವ ಉತ್ಕೃಷ್ಟ ಸೇವೆ-ಡಾ|ಎಸ್‌.ಎನ್‌

06:26 PM Jul 05, 2023 | Team Udayavani |

ಬ್ಯಾಡಗಿ: ವೈದ್ಯಕೀಯ ವೃತ್ತಿ ಪ್ರಾರಂಭದಲ್ಲಿ ಅತ್ಯಂತ ಕಠಿಣವಾಗಿ ತೋರುತ್ತದೆ. ಆದರೆ, ವೈದ್ಯರ ಸಮರ್ಪಣಾ ಮನೋಭಾವನೆ
ಅವರ ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶ ನೀಡಲಿದೆ. ಹತ್ತು ಹಲವು ಜೀವಗಳನ್ನು ಉಳಿಸಿದ ನೆನಪುಗಳು ಜನಮಾನಸದಲ್ಲಿ ಉಳಿಯಲಿವೆ ಎಂದು ಡಾ|ಎಸ್‌.ಎನ್‌. ನಿಡಗುಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್‌ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯರಿಗೆ ಆರೋಗ್ಯ ನೀಡುವ ಮೂಲಕ ವೈದ್ಯರು ದೈವೀ ಸ್ವರೂಪರೆಂದೇ ಭಾವಿಸಲಾಗುತ್ತಿದೆ. ಪ್ರತಿಯೊಬ್ಬರ ಬದುಕಿನಲ್ಲಿ ನೆನಪಿಡಬೇಕಾದ ಕೆಲಸ ಯಾವುದಾದರೂ ಇದ್ದರೆ ಅದು ಸಂಕಷ್ಟದಲ್ಲಿರುವ ರೋಗಿಗಳನ್ನು ಗುಣಪಡಿಸುವುದು.ಹೀಗಾಗಿ, ಪ್ರಸ್ತುತ ದಿನಗಳಲ್ಲಿ ಇದೊಂದು ಉತ್ಕೃಷ್ಟ ಸೇವೆಯಾಗಿ ಪರಿಣಮಿಸಿದೆ ಎಂದರು.

ವೈದ್ಯರ ಸಲಹೆಗಳನ್ನು ಜನರು ನಂಬುತ್ತಾರೆ. ಅವರ ಮೇಲೆ ವಿಶ್ವಾಸವಿಟ್ಟು ಮಾಡಿದ ಸೇವೆ ಮತ್ತು ಪ್ರಯತ್ನಗಳನ್ನು ಕೊಂಡಾಡುತ್ತಾರೆ. ಕೋವಿಡ್‌ ಸಂಕಷ್ಟ ಸಮಯದಲ್ಲಿ ವಿಶ್ವವೇ ಕಂಗೆಟ್ಟು ಹೋಗಿತ್ತು. ಆ ವೇಳೆ ಜೀವದ ಹಂಗು ತೊರೆದು ದೇಶದ ಜನರನ್ನು ಸಾವಿನಿಂದ ಪಾರು ಮಾಡಿದ ಕೀರ್ತಿ ವೈದ್ಯರಿಗೆ ಸಲ್ಲುತ್ತದೆ. ಆದರೆ ವ್ಯವಸ್ಥೆಯಲ್ಲಿನ ಕೆಲ ತಪ್ಪುಗಳನ್ನು ಎತ್ತಿ
ಹಿಡಿಯುವ ಕೆಲಸವೂ ಜನರಿಂದಾಗುತ್ತದೆ. ಅದಕ್ಕೆ ಚಿಂತಿಸುವ ಅಗತ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ಬಿಳಿ ಕೋಟು ಜ್ಞಾನದ ಸಂಕೇತ. ವೈದ್ಯರಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಹೆಮ್ಮೆಯಿಂದ ಬಿಳಿ ಕೋಟು ಧರಿಸಿಕೊಳ್ಳಿ. ಅಂದಾಗ ಮಾತ್ರ ನಿಮ್ಮ ಘನತೆ ಮತ್ತು ಗೌರವಗಳು ಹೆಚ್ಚಾಗಲು ಸಾಧ್ಯವೆಂದರು.

ವೇದಿಕೆಯಲ್ಲಿ ವೈದ್ಯಾಧಿಕಾರಿ ಡಾ.ಪುಟ್ಟರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಸುಹೀಲ್‌, ವೈದ್ಯರಾದ ಚಂದ್ರಕಾಂತ, ಶ್ರೀನಿವಾಸ, ಸುಶಾಂತ್‌, ವೀರೇಶ, ಎಸ್‌.ಚೇತನ್‌ ಬಸವರಾಜ, ಮಹೇಶ, ವಿನಾಯಕ, ಈಶ್ವರ, ಅಂದಾನಯ್ಯ, ನಾಗರಾಜ, ಸೂರ್ಯಕಾಂತ, ರೋಟರಿ ಸಂಸ್ಥೆ ಮಹಾಂತೇಶ ಸುಂಕದ, ಲಿಂಗಯ್ಯ ಹಿರೇಮಠ, ಪವಾಡಪ್ಪ ಆಚನೂರ್‌, ಮಾಲತೇಶ
ಉಪ್ಪಾರ, ಪಿ.ಎಲ್‌.ಮೇಲಗಿರಿ, ಸುರೇಶ ಗೌಡರ, ವಿಶ್ವನಾಥ ಅಂಕಲಕೋಟಿ, ಮಾಲತೇಶ ಅರಳೀಮಟ್ಟಿ, ಶಿವರಾಜ ಚೂರಿ, ಅನಿಲಕುಮಾರ ಬೊಡ್ಡಪಾಟಿ, ಬಸನಗೌಡ ಪಾಟೀಲ, ಕಿರಣ ವೇರ್ಣೇಕರ್‌, ಸತೀಶ ಅಗಡಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next