ಸಿಂಧನೂರು: ನಗರಕ್ಕೆ 24ಗಿ7 ಶುದ್ಧ ಕುಡಿವ ನೀರು ಪೂರೈಸುವ ಶುದ್ಧೀಕರಣ ಘಟಕಕ್ಕೆ ಸೋಮವಾರ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿದರು.
ನಗರ ಪ್ರತಿ ಮನೆಗೂ ಶುದ್ಧ ನೀರು ಸರಬರಾಜು ಮಾಡಲು ರೂಪಿಸಿರುವ ಯೋಜನೆ ಸ್ಥಿತಿ-ಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಎರಡು ದಿನದಲ್ಲಿ ನೀರು: ಕೆಯುಡಿಎಫ್‌ಸಿ ಇಇ ಎ.ವಿ. ಕೊಪ್ಪದ್, ಎಇಇ ಗಿರೀಶ್ ನಾಯಕ್, ಎಇ ಶರಣಪ್ಪ, ಎಸ್‌ಪಿಎಂಎಲ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಪ್ರವೀಣ್ ಕುಮಾರ್, 24ಗಿ7 ಕುಡಿವ ನೀರಿನ ಪೂರೈಕೆಗೆ ಈವರೆಗೂ ಆಗಿರುವ ಕೆಲಸಗಳ ಬಗ್ಗೆ ವಿವರಿಸಿದರು.
ಇನ್ನೆರಡು ದಿನದಲ್ಲಿ ನಗರದಲ್ಲಿನ 7 ಓವರ್‌ಹೆಡ್ ಟ್ಯಾಂಕ್‌ಗಳಿಗೆ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುವುದು. ಬಳಿಕ ಮನೆ-ಮನೆಗೆ ನೀರು ಸರಬರಾಜು ವ್ಯವಸ್ಥೆ ಮುಂದಿನ 15 ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ಲೋಪ-ದೋಷಗಳು ಕಂಡುಬಂದರೆ, ಅವುಗಳನ್ನು ಸರಿಪಡಿಸಿಕೊಂಡು ಬಳಿಕ ನಗರಸಭೆಗೆ ಹಸ್ತಾಂತರ ಮಾಡಲಾಗುವುದು ಎಂದರು.
ವಾರ್ಡ್‌ಗಳಿಗೆ ಭೇಟಿ: ಮೊದಲು ಓವರ್ ಹೆಡ್ ಟ್ಯಾಂಕ್‌ಗೆ ನೀರು ಸರಬರಾಜು ಮಾಡಿದ ಬಳಿಕ ಅಲ್ಲಿಂದ ಮನೆಗಳಿಗೆ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಓಕೆ ಎಂದ ಮೇಲೆ ಆರೇಳು ವಾರ್ಡ್‌ಗಳಿಗೆ ಹೋಗಿ ಪರಿಶೀಲನೆ ಮಾಡಲಾಗುವುದು ಎಂದು ವೇಳೆ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ತಿಳಿಸಿದರು. ಯುಜಿಡಿ ಕಾಮಗಾರಿ ಗುತ್ತಿಗೆ ಪಡೆದಿರುವ ಯಪಿಎಲ್ ಕಂಪನಿ ಮ್ಯಾನೇಜರ್ ಸತೀಶ್, ಒಳಚರಂಡಿಗೆ ಮನೆಗಳಿಂದ ಸಂಪರ್ಕ ಕಲ್ಪಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜನರು ಕನೆಕ್ಷನ್ ಕೊಟ್ಟ ಮೇಲೆ ಪರಿಶೀಲಿಸಲಿದ್ದು, ಒಂದು ವರ್ಷದ ಕಾಲ ನಿರ್ವಹಣೆ ಜವಾಬ್ದಾರಿಯಿದೆ ಎಂದರು.
ಈ ವೇಳೆ ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಸುರೇಶ ಜಾಧವ್, ನಗರಸಭೆ ಸದಸ್ಯರಾದ ಆಲಂಬಾಷಾ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಇತರರು ಇದ್ದರು.